Advertisement

ಮೋದಿ ಭಾರತದ ಹಿಟ್ಲರ್‌: ರಾಯರಡ್ಡಿ

04:59 PM Apr 11, 2019 | Team Udayavani |

ಮಸ್ಕಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ
ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ದೇಶದಲ್ಲಿ ಹಿಟ್ಲರ್‌ನಂತೆ ಸರ್ವಾ ಧಿಕಾರಿ ಧೋರಣೆ ಆಡಳಿತ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ
ರಾಯರೆಡ್ಡಿ ಆರೋಪಿಸಿದರು.

Advertisement

ಪಟ್ಟಣದ ತೇರು ಬಜಾರನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೊಪ್ಪಳ
ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ
ಪ್ರಚಾರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. 2014ರಲ್ಲಿ ಮೋದಿ
ನೀಡಿದ ಭರವಸೆಗಳಿಗೆ ಯುವಜನತೆ, ರೈತರು ಮರುಳಾಗಿ ಬಿಜೆಪಿಗೆ
ಬೆಂಬಲಿಸಿ ಪ್ರಧಾನಿಯಾಗಲು ಅವಕಾಶ ನೀಡಿದರು. ಆದರೆ ಕಳೆದ
ಐದು ವರ್ಷದಲ್ಲಿ ಜನರಿಗೆ ನೀಡಿದ ಭರವಸೆಗಳೆಲ್ಲಾ ಸುಳ್ಳಾಗಿವೆ. ಆದ್ದರಿಂದ
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಇಂದಿನ ರಾಜಕೀಯ ವ್ಯವಸ್ಥೆ ನೋಡಿದರೆ ನಾಚಿಕೆಯಾಗುತ್ತದೆ. ದುಡ್ಡು
ಇದ್ದವರು ಮಾತ್ರ ರಾಜಕೀಯದಲ್ಲಿ ಚುನಾವಣೆ ನಡೆಸುವಂತಾಗಿದೆ.
ಸಾಮಾನ್ಯರು ಚುನಾವಣೆಯಲ್ಲಿ ಪಾಲ್ಗೊಳ್ಳದಂತಹ ಪರಿಸ್ಥಿತಿ
ನಿರ್ಮಾಣವಾಗಿದೆ. ಬಿಜೆಪಿಯವರು ರಾಜಕೀಯ ವ್ಯವಸ್ಥೆಯನ್ನು ಹಾಳು
ಮಾಡಿದ್ದಾರೆಂದು ಆರೋಪಿಸಿದರು.

ಭಾರತದ ಶತಮಾನದ ಭವಿಷ್ಯ ಬರೆಯುವ ಚುನಾಚಣೆ ಇದಾಗಲಿದೆ
ಎಂದು ಈಗಾಗಲೇ ಬಿಂಬಿತವಾಗಿದ್ದು ಮತದಾರರು ಪ್ರಬುದ್ದತೆಯಿಂದ
ಮತ ಚಲಾಯಿಸಬೇಕು. ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌
ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರಿಗೆ ಮತ ನೀಡಿ ಆಯ್ಕೆಗೊಳಿಸಬೇಕೆಂದು
ವಿನಂತಿಸಿದರು.

ರಾಜಕಾರಣವನ್ನು ಸಮರ್ಥಿಸಿ ತಮ್ಮದೇ ಶೈಲಿಯಲ್ಲಿ ಮಾತನಾಡಿದ
ಮಾಜಿ ಸಚಿವ ಹಾಗೂ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ
ಬಯ್ನಾಪುರ, ನೆಹರು ಕುಟುಂಬಸ್ಥರು ಮೊದಲಿನಿಂದಲೂ ರಾಜಕಾರಣ
ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಇರುವವರು ರಾಜಕೀಯವನ್ನು
ಮಾಡುತ್ತಾರೆ. ಹಿಂದೆ ರಾಜರ ಮಕ್ಕಳು ರಾಜರಾಗುತ್ತಿದ್ದಿಲ್ಲವೇ? ನವಾಬರ
ಮಕ್ಕಳು ನವಾಬರಾಗುತ್ತಿದ್ದಿಲ್ಲವೇ ಎಂದು ಕುಟುಂಬ ರಾಜಕಾರಣವನ್ನು
ಸಮರ್ಥಿಸಿಕೊಂಡರು.

Advertisement

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಶಿವರಾಮೇಗೌಡ,
ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಶಾಸಕ ಪ್ರತಾಪಗೌಡ ಪಾಟೀಲ, ಮಸ್ಕಿ ಬ್ಲಾಕ್‌
ಕಾಂಗ್ರೆಸ್‌ ಅಧ್ಯಕ್ಷ ಬಸವಂತರಾಯ ಕುರಿ ಮಾತನಾಡಿದರು.

ಅಂದಾನೆಪ್ಪ ಗುಂಡಳ್ಳಿ, ಮಹಾದೇವಪ್ಪ ಗೌಡ, ಮಲ್ಲಿಕಾರ್ಜುನ ಮಟ್ಟೂರು,
ರವಿಕುಮಾರ ಪಾಟೀಲ, ಮಲ್ಲೇಶ ಗೌಡ, ಕೊಪ್ಪಳ ಕಾಂಗ್ರೆಸ್‌ ಮಹಿಳಾ
ಘಟಕದ ಅಧ್ಯಕ್ಷೆ ಮಾಲತಿ ನಾಯಕ, ಡಾ| ಶಿವಶರಣಪ್ಪ ಇತ್ಲಿ, ಡಾ| ಬಿ.ಎಚ್‌
.ದಿವಟರ, ಸಿದ್ರಾಮಪ್ಪ ಸಾಹುಕಾರ ಸೇರಿ ಕಾರ್ಯಕರ್ತರು, ಮುಖಂಡರು
ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next