Advertisement
ಈಕೆ ದೆಹಲಿ ವಿವಿಯ ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿನಿ ಕೋಮಲ್ ಶರ್ಮಾ ಎಂದು ಪೊಲೀಸರ ವಿಶೇಷ ಘಟಕ ತಿಳಿಸಿದ್ದು, ಆಕೆಯ ಮೊಬೈಲ್ ಸ್ವಿಚ್x ಆಫ್ ಆಗಿದ್ದು, ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದಿದೆ. ಜತೆಗೆ, ಇಂಡಿಯಾ ಟುಡೇ ಮಾಡಿದ ಕುಟುಕು ಕಾರ್ಯಾಚರಣೆಯ ಆಧಾರದಲ್ಲಿ, ಎಬಿವಿಪಿ ಮತ್ತಿಬ್ಬರು ಸದಸ್ಯರಾದ ಅಕ್ಷತ್ ಅವಸ್ಥಿ ಮತ್ತು ರೋಹಿತ್ ಶಾ ಅವರಿಗೂ ನೋಟಿಸ್ ಜಾರಿ ಮಾಡಿದ್ದು, ಅವರು ಸೋಮವಾರದ ವಿಚಾರಣೆಗೆ ಹಾಜರಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಒಟ್ಟಾರೆ 49 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ನಡುವೆ, ಹಿಂಸಾಚಾರದ ದಿನದ ದತ್ತಾಂಶಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಸುರಕ್ಷಿತವಾಗಿಡುವಂತೆ ನಿರ್ದೇಶಿಸಬೇಕು ಎಂದು ಕೋರಿ ಜೆಎನ್‌ಯು ಪ್ರೊಫೆಸರ್‌ವೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ದೆಹಲಿ ಹೈಕೋರ್ಟ್ ನಡೆಸಿದೆ. ಈ ಕುರಿತು ಪ್ರತಿಕ್ರಿಯೆ ಕೋರಿ ದೆಹಲಿ ಪೊಲೀಸರು, ಸರ್ಕಾರ, ವಾಟ್ಸ್‌ಆ್ಯಪ್, ಗೂಗಲ್ ಹಾಗೂ ಆ್ಯಪಲ್ ಕಂಪನಿಗಳಿಗೂ ನೋಟಿಸ್ ಜಾರಿ ಮಾಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡ ಕುರಿತು ದೆಹಲಿ ಪೊಲೀಸ್ ಅಧಿಕಾರಿಗಳನ್ನು ಸಂಸದೀಯ ಸಮಿತಿ ಸೋಮವಾರ ಪ್ರಶ್ನೆ ಮಾಡಿದೆ. ಬಲಪ್ರಯೋಗ ಮಾಡುವ ಬದಲು ವಿದ್ಯಾರ್ಥಿಗಳೊಂದಿಗೆ ಪ್ರೌಢಿಮೆಯಿಂದ ವರ್ತಿಸಬಹುದಿತ್ತು ಎಂದೂ ಸಲಹೆ ನೀಡಿದೆ.
Related Articles
ಒಂದು ವಾರದ ಗೊಂದಲದ ಬಳಿಕ ಸೋಮವಾರ ಜೆಎನ್‌ಯುನಲ್ಲಿ ತರಗತಿಗಳು ಪುನಾರಂಭವಾಗಬೇಕಿತ್ತಾದರೂ, ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಪ್ರತಿಭಟನೆಯಿಂದ ಅದು ಸಾಧ್ಯವಾಗಿಲ್ಲ. ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದ ಬೇಡಿಕೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದಾರೆ.
Advertisement