Advertisement

ಮಾಸ್ಕ್, ಸಾಮಾಜಿಕ ಅಂತರ; ಒಂದು ಕೋಟಿ ದಂಡ ಸಂಗ್ರಹ

09:28 AM Jul 12, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸದವರ ಸಂಖ್ಯೆಯಲ್ಲಿ ಇನ್ನು ಇಳಿಕೆಯಾಗಿಲ್ಲ. ಈ ರೀತಿ ನಿಯಮ ಉಲ್ಲಂಘನೆ ಮಾಡುವವರಿಂದ ಕಳೆದ 32 ದಿನಗಳಲ್ಲಿ ಬರೋಬ್ಬರಿ 1.01 ಕೋಟಿ ರೂ.ದಂಡ ಸಂಗ್ರಹಿಸಲಾಗಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರ ಕಾಪಾಡದವರಿಂದ ತಲಾ 200ರೂ.ನಂತೆ ಮಾರ್ಷಲ್‌ಗ‌ಳು ದಂಡ ಸಂಗ್ರಹಿಸಲಾಗುತ್ತಿದ್ದು, ಇದಕ್ಕೆ ಪೊಲೀಸರು ಸಹ ಸಹಕಾರ ನೀಡಿದ್ದಾರೆ. ನಗರದಲ್ಲಿ ಪ್ರತಿದಿನ ಕನಿಷ್ಟ 200 ರಿಂದ 2 ಸಾವಿರ ಜನರು ನಿಯಮ ಉಲ್ಲಂಘನೆ ಮಾಡುತ್ತಿರುವುದು ವರದಿಯಾಗಿದೆ. ನಗರದಲ್ಲಿ ಬಿಬಿಎಂಪಿ ಮಾರ್ಷಲ್‌ಗ‌ಳು ಮತ್ತು ಪೊಲೀಸ್‌ ಸಿಬ್ಬಂದಿ ಜಂಟಿಯಾಗಿ ದಂಡ ವಿಧಿಸುವ ಕಾರ್ಯಾಚರಣೆ ನಡೆಸುತ್ತಿದ್ದು, ಜೂ.9 ರಿಂದ ಜು.10ರ ವರೆಗೆ (32 ದಿನ) 50,706 ಜನ ನಿಯಮ ಉಲ್ಲಂಘನೆ ಮಾಡಿದ್ದು, ಇವರಿಂದ 1,01,37,558 ರೂ. ದಂಡ ಸಂಗ್ರಹಿಸಲಾಗಿದೆ.

ಇದರಲ್ಲಿ ಸಾಮಾಜಿಕ ಅಂತರ ಕಾಪಾಡದ 3,747 ಜನರಿಂದ 7,51,013 ರೂ ಹಾಗೂ ಮಾಸ್ಕ್ ಧರಿಸದ 49,959 ಜನರಿಂದ 93,86,545 ರೂ. ದಂಡ ಸಂಗ್ರಹಿಸಲಾಗಿದೆ. ಇನ್ನು ಸಾಮಾಜಿಕ ಅಂತರ ಪಾಲಿಸದೆ ನಿರ್ಲಕ್ಷ್ಯ ವಹಿಸಿದ 149 ವಾಣಿಜ್ಯ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next