ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆ ಅಧಿಕ ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿರುವ ನಗರದ ಔಷಧಾಲಯಗಳ ಮೇಲೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ ನೋಟಿಸ್ ನೀಡಿದ್ದಾರೆ.
ಆರೋಗ್ಯ ಇಲಾಖೆಯ ಸಹಾಯವಾಣಿ 104ಕ್ಕೆ ಬಂದ ದೂರುಗಳನ್ನು ಆಧರಿಸಿ ಎರಡು ಇಲಾಖೆ ಅಧಿಕಾರಿಗಳು ಜಂಟಿ ಯಾಗಿ ದಾಳಿ ನಡೆಸಿದ್ದರು. ಈ ವೇಳೆ ಅನಧಿಕೃತವಾಗಿ ಮಾಸ್ಕ ದಾಸ್ತಾನು ಹೊಂದಿದ್ದ ಹಾಗೂ ಅಧಿಕ ದರಕ್ಕೆ ಮಾರಾಟ ಮಾಡುತ್ತಿದ್ದವರಿಗೆ ನೋಟಿಸ್ ಜಾರಿಗೊಳಿ ಸಿರುವ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಕಸ್ತೂರಿ ನಗರದಲ್ಲಿನ ಜಯಾನ್ ಹೆಲ್ತ್ ಕೇರ್ ಫಾರ್ಮಾದಲ್ಲಿ 12 ರೂ. ಮಾಸ್ಕ್ ಗಳನ್ನು 20 ರೂ.ಗೆ ಮಾರಾಟ ಮಾಡಲಾ ಗುತ್ತಿತ್ತು. ಎನ್-95 ಮಾಸ್ಕ್ ಗಳನ್ನು 595 ರೂ. ನೀಡಲಾಗುತ್ತಿತ್ತು ಪತ್ತೆಯಾಗಿದೆ. ಬೆಂಗಳೂರಿನ ವಿಜಯನಗರದ ಮಾರುತಿ ಮೆಡಿಕಲ್ಸ್‌ನಲ್ಲಿ ಎನ್-95 ಮಾಸ್ಕ್ ಗಳ ದಾಸ್ತಾನು ಮಾಡಲಾಗಿದ್ದು, ಅವುಗಳ ಮೇಲೆ ಔಷಧಾಲಯದವರೇ 140 ರೂ. ನಿಂದ 230 ರೂ. ದರದ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ರಾಜರಾಜೇಶ್ವರಿ ನಗರದ ಅಪೊಲೊ ಫಾರ್ಮಸಿಯು 3ಎಂ ಕಂಪನಿಯ ಮಾಸ್ಕ್ ಗ ಳನ್ನು ರಸೀದಿ ಇಲ್ಲದೆ ಖರೀದಿಸಿ, 275 ರೂ.ಗಳಿಗೆ ಮಾರಾಟ ಮಾಡುತ್ತಿತ್ತು. ಇದೇ ಪ್ರದೇಶದ ಸಂಜೀವಿನಿ ತ್ರಿನೇತ್ರ ಔಷಧಾಲಯದಲ್ಲಿ ಸರ್ಜಿಕಲ್ ಮಾಸ್ಕ್ ಗಳನ್ನು 30 ರೂ. ಎನ್-95 ಮಾಸ್ಕ್ಗಳನ್ನು 300 ರೂ.ಗೆ ಹಾಗೂ ರಾಮ್ ಮೆಡಿಕಲ್ಸ್ ಆ್ಯಂಡ್ ಜನರಲ್ ಸ್ಟೋರ್ಸ್‌ಗಳಲ್ಲಿ ಸಾಮಾನ್ಯ ಮಾಸ್ಕ್ಗಳನ್ನು 70 ರೂ.ವರೆಗೆ ಹಾಗೂ ಎನ್-95 ಮಾಸ್ಕ್ಗಳನ್ನು 350 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಈ ಎಲ್ಲ ಮಳಿಗೆಗಳ ವಿರುದ್ಧ ನಿಯಮ ಉಲ್ಲಂಘನೆ ಆರೋಪದಡಿ ನೋಟಿಸ್ ಜಾರಿ ಮಾಡಲಾಗಿದೆ.