ನವದೆಹಲಿ: ದೇಶದ ಒಂದೊಂದೇ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗತೊಡಗಿದ್ದು, ದೆಹಲಿಯ ಬಳಿಕ ಈಗ ನೆರೆಯ ತಮಿಳುನಾಡಿನಲ್ಲೂ ಕಟ್ಟುನಿಟ್ಟಿನ ನಿಯಮ ಮರು ಜಾರಿಯಾಗತೊಡಗಿವೆ.
ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಜನರಲ್ಲಿ ಮುನ್ನೆಚ್ಚರಿಕೆಯ ಕೊರತೆ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಶುಕ್ರವಾರದಿಂದ “ಮಾಸ್ಕ್ ಕಡ್ಡಾಯ’ ನಿಯಮವನ್ನು ಬಿಗಿಗೊಳಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸುವುದಾಗಿ ಘೋಷಿಸಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದ್ದು, ಗುರುವಾರ 39 ಹೊಸ ಪ್ರಕರಣ ಪತ್ತೆಯಾಗಿದೆ.
ಇದನ್ನೂ ಓದಿ:ಸಂಸದೆ ನವನೀತ್ ಕೌರ್, ಪತಿ ವಿರುದ್ಧ ಕೇಸು ದಾಖಲು
ಇನ್ನೊಂದೆಡೆ, ಮಾಸ್ಕ್ ಕಡ್ಡಾಯ ನಿಯಮವನ್ನು ರದ್ದು ಮಾಡಿದ ಮೂರೇ ವಾರಗಳಲ್ಲಿ ದೆಹಲಿ ಸರ್ಕಾರವು ಶುಕ್ರವಾರದಿಂದಲೇ ಅನ್ವಯವಾಗುವಂತೆ ನಿಯಮವನ್ನು ಮರುಜಾರಿ ಮಾಡಿದೆ. ಜತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ವಿಧಿಸುವುದಾಗಿ ಹೇಳಿದೆ.
ಜತೆಗೆ, ಶಾಲೆಗಳಲ್ಲಿ ಹಲವು ಹಂತದ ಮುನ್ನೆಚ್ಚರಿಕೆ ಕ್ರಮಗಳನ್ನು ಘೋಷಿಸಲಾಗಿದೆ. ದೇಶಾದ್ಯಂತ 24 ಗಂಟೆಗಳ ಅವಧಿಯಲ್ಲಿ 2,451 ಮಂದಿಗೆ ಸೋಂಕು ದೃಢಪಟ್ಟಿದ್ದು, 54 ಮಂದಿ ಮೃತಪಟ್ಟಿದ್ದಾರೆ.