Advertisement

ಮಾಸ್ಕ್ ಇದ್ದರೆ ಮದ್ಯ, ಖರೀದಿಗಿಲ್ಲ ಮಿತಿ

04:54 PM May 04, 2020 | Suhan S |

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ಪರಿಣಾಮ ಕಳೆದ 40 ದಿನಗಳಿಂದ ಮದ್ಯ ಸಿಗದೆ ತೀವ್ರ ಕಂಗಾಲಾಗಿದ್ದ ಮದ್ಯ ಪ್ರಿಯರ ಆರ್ತನಾದಕ್ಕೆ ಕೊನೆಗೂ ಸ್ಪಂದದಿಸಿರುವ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಮದ್ಯ ಖರೀದಿಗೆ ಮಿತಿ ಇಲ್ಲವಾಗಿದೆ.

Advertisement

ಮಹಾಮಾರಿ ಕೋವಿಡ್ 19 ಸೋಂಕು ಇಡೀ ಜಗತ್ತನ್ನು ವ್ಯಾಪಿಸಿ ಮಾನವ ಸಮೂಹ ಬೆಚ್ಚಿಬೀಳೀಸುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾ.22 ರಿಂದಲೇ ಲಾಕ್‌ಡೌನ್‌ ಘೋಷಿಸಿದ್ದರಿಂದ ಮದ್ಯ ಸಿಗದೆ ಮದ್ಯ ಪ್ರಿಯರು ಪರಿತಪ್ಪಿಸು ತ್ತಿದ್ದರು. ಮತ್ತೂಂದೆಡೆ ಸರ್ಕಾರಕ್ಕೆ ಬರುವ ಅಬಕಾರಿ ಆದಾಯಕ್ಕೂ ಖೋತಾ ಬಿದ್ದ ಪರಿಣಾಮ ಸರ್ಕಾರ ಕೊನೆಗೂ 40 ದಿನಗಳ ಬಳಿಕ ರಾಜ್ಯದಲ್ಲಿ ಮದ್ಯ ಪ್ರಿಯರ ಹಕ್ಕೊತ್ತಾ ಯಕ್ಕೆ ಮಣಿದು ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಸೋಮವಾರದಿಂದ ಜಿಲ್ಲೆಯಲ್ಲಿ ಮದ್ಯದ ಘಮಲು ಕಾಣಲಿದೆ.

89 ಮಳಿಗೆಗಳಲ್ಲಿ ಮಾರಾಟ: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ ಸೇರಿದ ಚಿಲ್ಲರೆ ಮಾರಾಟ ಮಳಿಗೆಗಳು ಹಾಗೂ ಎಂಎಸ್‌ಐಲ್‌ ಮಳಿಗೆಗಳು ಸೇರಿ ಒಟ್ಟು 89 ಮಳಿಗೆ ಗಳಲ್ಲಿ ಮಾತ್ರ ಸೋಮವಾದಿಂದ ಮದ್ಯ ಮಾರಾಟವಾಗಲಿದೆ. ಇದಕ್ಕಾಗಿ ಅಬಕಾರಿ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದ್ದು, ಮದ್ಯ ಮಾರಾಟದ ವಿಚಾರಕ್ಕೆ ರಾಜ್ಯದ ಅಬಕಾರಿ ಆಯುಕ್ತರು ಹೊರಡಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಜಿಲ್ಲೆಯ ಎಂಎಸ್‌ಐಎಲ್‌ ಹಾಗೂ ಚಿಲ್ಲರೆ ಮದ್ಯ ಮಾರಾಟಗಾರರಿಗೆ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಸೂಚಿಸಿದ್ದಾರೆ.

ಸಮಯ ನಿಗದಿ: ಮಳಿಗೆಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೂ ಮಾತ್ರ ಮದ್ಯ ಮಾರಾಟವಾಗಲಿದೆ. ಬಾರ್‌ ಗಳಲ್ಲಿ ಮದ್ಯ ಮಾರಾಟ ಮಾಡಿದರೆ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಎಂದು ಹೇಳಿ ಕೇವಲ ಪಾರ್ಸಲ್‌ ತೆಗೆದುಕೊಂಡು ಹೋಗಲು ಮಾತ್ರ ಸರ್ಕಾರ ಅನುಮತಿ ನೀಡಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವರಿಗೆ ಮಾತ್ರ ಮದ್ಯ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಮಳಿಗೆಗಳ ಮುಂದೆ ಜನದಟ್ಟಣೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next