Advertisement

ಮಾಸ್ಕ್; ನಾಲ್ಕು ಕಮಿಟಿ ರಚನೆ

12:07 PM Oct 28, 2020 | Suhan S |

ಬೆಂಗಳೂರು: ನಗರದಲ್ಲಿ ಸೋಂಕು ಹಬ್ಬುವುದಕ್ಕೆ ಕಡಿವಾಣ ಹಾಕಲು ಹಾಗೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯನ್ನು ತಡೆಯುವ ಉದ್ದೇಶದಿಂದ ವಾರ್ಡ್‌, ವಿಭಾಗ, ವಲಯ ಹಾಗೂ ಬಿಬಿಎಂಪಿ  ಕೇಂದ್ರ ಕಚೇರಿಯ ಅಧಿಕಾರಿಗಳನ್ನು ಒಳಗೊಂಡ ನಾಲ್ಕು ಪ್ರತ್ಯೇಕ ಕಮಿಟಿ ಗಳನ್ನು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ರಚನೆ ಮಾಡಿದ್ದಾರೆ.

Advertisement

ಕೋವಿಡ್‌ ತಡೆ ತಾಂತ್ರಿಕ ಕಾರ್ಯ  ಪಡೆಯ ಸಲಹೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಟ್ಟದಲ್ಲಿ ನಡೆದ ಚರ್ಚೆಗಳು ಹಾಗೂ ಸಲಹೆಗಳ ಆಧಾರದ ಮೇಲೆ ಈ ರೀತಿ ನಾಲ್ಕುಕಮಿಟಿಗಳನ್ನು ರಚನೆ ಮಾಡಲಾಗಿದೆ. ಪೊಲೀಸ್‌ ಇಲಾಖೆಯ ಸಹಭಾಗಿತ್ವದಲ್ಲಿ ಮತ್ತಷ್ಟು ಕಟ್ಟುನಿಟ್ಟಾಗಿ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

1.ವಾರ್ಡ್‌ ಕಮಿಟಿ: ಹಾಲಿ ಮಾರ್ಷಲ್‌ಗ‌ಳೊಂದಿಗೆ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ ಕಮಿಟಿ ರಚನೆ ಮಾಡಲು ನಿರ್ಧರಿಸಲಾಗಿದ್ದು, ಈ ಕಮಿಟಿಯಲ್ಲಿ ಸಹಾಯಕ ಎಂಜಿನಿಯರ್‌, ಹಿರಿಯ ಆರೋಗ್ಯಾಧಿಕಾರಿ, ವಾರ್ಡ್‌ ಮಾರ್ಷಲ್‌ ಹಾಗೂ ಪೊಲೀಸ್‌ ಸಿಬ್ಬಂದಿ ಸಹ ಇರಲಿದ್ದು,ನಗರದಲ್ಲಿ ಮಾಸ್ಕ್, ಸಾಮಾಜಿಕ ಅಂತರ ನಿಯಮ ಉಲ್ಲಂಘಿಸುವವರಿಗೆ ತಲಾ 250 ರೂ. ದಂಡ ವಿಧಿಸಲಿದ್ದಾರೆ.

2.ವಿಭಾಗಿಯ ಮಟ್ಟದ ಕಮಿಟಿ: ವಿಭಾಗೀಯ ಮಟ್ಟದ ಕಮಿಟಿಯೂ ಪ್ರತಿ ವಾರ ವಾರ್ಡ್‌ ಮಟ್ಟದ ಕಮಿಟಿಯ ಕಾರ್ಯವೈಖರಿಯ ಬಗ್ಗೆಪರಿಶೀಲನೆ ನಡೆಸಲಿದೆ.  ಇದರಲ್ಲಿ ಕಾರ್ಯಪಾಲಕ ಎಂಜಿನಿಯರ್‌, ಆರೋಗ್ಯಾಧಿಕಾರಿ ಹಾಗೂ ಒಬ್ಬರು ಹಿರಿಯ ಪೊಲೀಸ್‌ ಅಧಿಕಾರಿ ಇರಲಿದ್ದಾರೆ.

3 ವಲಯ ಮಟ್ಟದ ಕಮಿಟಿ: ವಲಯ ಮಟ್ಟದ ಕಮಿಟಿಯು ವಿಭಾಗೀಯ ಮಟ್ಟದ ಕಮಿಟಿ ನೀಡುವ ವರದಿಯ ಪರಿಶೀಲನೆ ನಡೆಸಲಿದೆ. ಇದರಲ್ಲಿ ಆಯಾ ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌, ಆರೋಗ್ಯಾಧಿಕಾರಿ, ಮಾರ್ಷಲ್‌ಗ‌ಳ ವಲಯ ಮುಖ್ಯಸ್ಥರು ಹಾಗೂ ಒಬ್ಬರು ಹಿರಿಯ ಪೊಲೀಸ್‌ ಅಧಿಕಾರಿ ಇರಲಿದ್ದಾರೆ.

  1. ಕೇಂದ್ರ ಕಚೇರಿ ಕಮಿಟಿ: ಬಿಬಿ ಎಂಪಿಯ ಕೇಂದ್ರ ಕಚೇರಿಯಲ್ಲಿ ಕಮಿಟಿ ರಚನೆ ಮಾಡಲಾಗಿದ್ದು, ಇದರಲ್ಲಿ ಹಿರಿಯ ಐಎಎಸ್‌ ಅಧಿಕಾರಿ ನವೀನ್‌ರಾಜ್‌ಸಿಂಗ್‌, ವಿಶೇಷಆಯುಕ್ತ ಘನತ್ಯಾಜ್ಯ ನಿರ್ವಹಣೆ ರಂದೀಪ್‌, ಜಂಟಿ ಆಯುಕ್ತ ಸಫ‌ì ರಾಜ್‌ ಖಾನ್‌, ಚೀಫ್ ಮಾರ್ಷಲ್‌ ರಾಜ್ಬೀರ್‌ಸಿಂಗ್‌, ವಲಯಗಳ ಮೇಲ್ವಿಚಾರಕ ಮಾರ್ಷಲ್‌ಗ‌ಳು, ಎಲ್ಲ ವಲಯಗಳ ಮುಖ್ಯ ಆರೋಗ್ಯಾಧಿಕಾರಿಗಳು, ಘ.ನ ಮುಖ್ಯ ಎಂಜಿನಿಯರ್‌ ಹಾಗೂ ಒಬ್ಬರು ಹಿರಿಯ ಪೊಲೀಸ್‌ ಅಧಿಕಾರಿ ತಂಡದಲ್ಲಿಇರಲಿದ್ದಾರೆ. ಕೇಂದ್ರ ಕಚೇರಿಯಲ್ಲಿರುವ ಕಮಿಟಿಯ ಸದಸ್ಯರು ಮೂರು ಕಮಿಟಿಗಳ ಕಾರ್ಯವೈಖರಿಯ ಬಗ್ಗೆ ಪ್ರತಿ ವಾರ ಸಭೆ ನಡೆಸಲಿದ್ದಾರೆ.
Advertisement

5.ವರ್ಷದ ಒಳಗಿನ ಮಕ್ಕಳಿಗೆ ಮಾಸ್ಕ್ ಬೇಡ: ಐದು ವರ್ಷದ ಒಳಗಿನ ಮಕ್ಕಳಿಗೆ  ಮಾಸ್ಕ್ ಹಾಕಿಕೊಳ್ಳುವುದು ಕಷ್ಟವಾಗುವ ಹಿನ್ನೆಲೆಯಲ್ಲಿ, ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಈ ಹಂತದಲ್ಲಿ ಮಕ್ಕಳಿಗೆ ತಿಳವಳಿಕೆಯ ಕೊರತೆಯೂ ಇರುವ ಹಿನ್ನೆಲೆಯಲ್ಲಿ ಐದು ವರ್ಷದ ಒಳಗಿನ ಮಕ್ಕಳಿಗೆ ಮಾಸ್ಕ್ ಹಾಕುವುದು ಕಡ್ಡಾಯವಲ್ಲ ಎಂದು ಆಯುಕ್ತರು ತಿಳಿಸಿದರು.

ಸಾರ್ವಜನಿಕರ ಗೊಂದಲಗಳಿಗೆ ಸ್ಪಷ್ಟನೆ: ನಗರದಲ್ಲಿ ಕಾರ್‌ ಚಲಾಯಿಸು ವಾಗ ಹಾಗೂ ಕಾರಿನ ಗಾಜು ಮುಚ್ಚಿದ ಸಂದರ್ಭದಲ್ಲಿ, ಒಬ್ಬರೇ ಕಾರು ಚಲಾಯಿಸುವಾಗ, ಪಾರ್ಕಿಂಗ್‌ ವೇಳೆ ಒಬ್ಬರೇ ಬೈಕ್‌ ಚಲಾಯಿಸುವಾಗ ಸೇರಿದಂತೆ ಎಲ್ಲ ಸಂದರ್ಭಗಳಲ್ಲೂ ಕಡ್ಡಾಯ ಮಾಸ್ಕ್ ಧರಿಸಿರಬೇಕು ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next