Advertisement

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

07:11 PM Jun 25, 2021 | Team Udayavani |

ಜೆರುಸಲೇಂ: ಇಸ್ರೆಲ್‌ನಲ್ಲಿ ಡೆಲ್ಟಾ ರೂಪಾಂತರಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮತ್ತೆ ಆದೇಶ ಹೊರಡಿಸಲಾಗಿದೆ.

Advertisement

ಹತ್ತು ದಿನಗಳ ಹಿಂದೆ (ಜೂ.16)ಮಾಸ್ಕ್ ಆದೇಶ ರದ್ದುಗೊಳಿಸಲಾಗಿತ್ತು. ಸಾರ್ವಜನಿಕ ಸ್ಥಳಗಳಿಗೆ ಮನೆಯಿಂದ ಹೊರಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವಾಲಯ ಆದೇಶಿಸಿದೆ.

ನಾಲ್ಕು ದಿನಗಳ ಅವಧಿಯಲ್ಲಿ ಅಲ್ಲಿ 100ಕ್ಕೂ ಹೆಚ್ಚು ಕೊರೊನಾ ಸೋಂಕು ದೃಢಪಟ್ಟಿರುವುದೇ ಈ ಕ್ರಮಕ್ಕೆ ಕಾರಣ. ಇಸ್ರೇಲ್‌ನ 9 ಮಿಲಿಯ ಜನರ ಪೈಕಿ 5.2 ಮಿಲಿಯ ಮಂದಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ :ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next