Advertisement

ಯಾದಗಿರಿ ಜಿಲ್ಲಾದ್ಯಂತ ಮಾಸ್ಕ್ ಅಭಿಯಾನ

06:53 PM Oct 11, 2020 | Suhan S |

ಯಾದಗಿರಿ: ಕೋವಿಡ್ ಕಡಿವಾಣ ಹಾಕಲು ಮಾಸ್ಕ್ ಧರಿಸುವುದೇ ಔಷಧಿಯಾಗಿದೆ. ಆದ್ದರಿಂದ ಜಿಲ್ಲಾದ್ಯಂತ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಪಾಡಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಡಂಗೂರ ಸಾರುವ ಮೂಲಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಸೂಚಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೋವಿಡ್‌-19 ಕಾರ್ಯಪಡೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾದ್ಯಂತ ಮಾಸ್ಕ್ ಧರಿಸುವ ಅಭಿಯಾನ ಹಮ್ಮಿಕೊಂಡು ಸಾಮಾಜಿಕ ಅಂತರಕಾಯ್ದುಕೊಳ್ಳುವ ಬಗ್ಗೆ ಧ್ವನಿವರ್ಧಕದ ಮೂಲಕಜಾಗೃತಿ ಮೂಡಿಸಬೇಕು. ಜಿಲ್ಲೆಯ ಸರಕಾರಿ, ಖಾಸಗಿ ಕಚೇರಿ, ಬ್ಯಾಂಕ್‌, ಶಾಲಾ-ಕಾಲೇಜುಗಳು,ಪಂಚಾಯತಿ ಕಾರ್ಯಾಲಯಗಳಲ್ಲಿ ಕೋವಿಡ್‌-19 ಸೋಂಕು ತಡೆಗೆ ಅನುಸರಿಬಹುದಾದ ಕ್ರಮಗಳನ್ನು ಬ್ಯಾನರ್‌ ಮೂಲಕ ಪ್ರದರ್ಶಿಸಲು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ತಜ್ಞ ವೈದ್ಯರು ಮತ್ತು ವೈದ್ಯರನ್ನು ಕಲಬುರಗಿಯ ಜಿಮ್ಸ್‌ ಮತ್ತು ಇಎಸ್‌ಐ ವೈದ್ಯಕೀಯ ವಿದ್ಯಾಲಯಗಳಿಂದ ನಿಯೋಜಿಸಲಾಗುತ್ತಿದೆ. ಇದರ ಮೇಲ್ವಿಚಾರಣೆಯನ್ನು ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿಗಳು ನಿರ್ವಹಿಸಬೇಕು. ಜತೆಗೆ ಜಿಲ್ಲಾ ಕಾರ್ಯಪಡೆಯು ಸರ್ಕಾರ ನೀಡಿದ ಕೋವಿಡ್‌-19 ಮಾರ್ಗಸೂಚಿ ಮತ್ತು ಸುತ್ತೋಲೆಗಳಂತೆಸನ್ನಿವೇಶವನ್ನು ನಿಭಾಯಿಸಬೇಕೆಂದು ಸೂಚಿಸಿದರು.

ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾ ಧಿಕಾರಿ ಪ್ರಕಾಶ ಜಿ. ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಇಂದುಮತಿ ಕಾಮಶೆಟ್ಟಿ ಸೇರಿದಂತೆ ತಜ್ಞರ ಸಮಿತಿ ಸದಸ್ಯರು ಇದ್ದರು.

ಕೋವಿಡ್‌ ಸೋಂಕಿತರು-ಮರಣ ವಿವರ :  ಸಭೆಯಲ್ಲಿ ಮಾಹಿತಿ ನೀಡಿದ ವೈದ್ಯಾಧಿಕಾರಿಗಳು, ಈ ಮೊದಲು ಜಿಲ್ಲೆಯಲ್ಲಿ ಪ್ರತಿದಿನ 200 ಜನರ ಗಂಟಲು ದ್ರವ ಮಾದರಿ ತಪಾಸಣೆ ಮಾಡಲಾಗುತ್ತಿತ್ತು, ಈಗ ಪ್ರತಿ ದಿನ 1200 ಜನರ ಗಂಟಲು ದ್ರವ ಮಾದರಿ ತಪಾಸಣೆ ಮಾಡಲಾಗುತ್ತಿದೆ. 8,252 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 851 ರೋಗಿಗಳನ್ನು ಪ್ರತ್ಯೇಕವಾಗಿ ಮನೆಯಲ್ಲಿ ಇರಿಸಲ್ಪಟ್ಟಿದೆ ಹಾಗೂ 166 ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರಲ್ಲಿ 5 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 56 ಜನರು ಕೋವಿಡ್‌-19 ಸೋಂಕಿನಿಂದಾಗಿ ಮೃತಪಟ್ಟಿದ್ದು, ಪ್ರಾಥಮಿಕ ಸಂಪರ್ಕದಲ್ಲಿ 28,792 ಜನರು ಹಾಗೂ 28,484 ಜನರು ದ್ವಿತೀಯ ಸಂಪರ್ಕದವರಿದ್ದಾರೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌-19 ಸೋಂಕಿನಿಂದ ಮೃತಪಟ್ಟವರ ವಿವರ, ವಯಸ್ಸು, ಲಿಂಗವಾರು ಮತ್ತು ದುರ್ಬಲ ಗುಂಪಿನೊಂದಿಗೆ (ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ) ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸೋಂಕಿತರ ಮರಣ ಪ್ರಮಾಣ ಶೇ.0.5 ರಷ್ಟಿದ್ದು ಇವರಲ್ಲಿ ಶೇ.45ರಷ್ಟು ಜನ 61-70 ವಯೋಮಾನದವರು ಮತ್ತು ಶೇ.77 ಪುರುಷರು, ಶೇ.23 ಮಹಿಳೆಯರು ಮೃತಪಟ್ಟಿದ್ದಾರೆ. ಶೇ.91ರಷ್ಟು ಜನರು ದುರ್ಬಲ ಗುಂಪಿಗೆ ಸೇರಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next