Advertisement
ಹೊರಗೆ ಅಪಾಯ ಜಾಸ್ತಿಮ್ಯಾಸಚುಸೆಟ್ಸ್ ಡಾರ್ಟ್‌ಮೌತ್ ವಿಶ್ವವಿದ್ಯಾಲಯದ ರೋಗ ನಿರೋಧಕ ಮತ್ತು ಜೀವಶಾಸ್ತ್ರದ ಪ್ರಾಧ್ಯಾಪಕ ಎರಿನ್ ಬ್ರೊಮೇಜ್ ಈ ಕುರಿತು ಅಧ್ಯಯನ ನಡೆಸಿದ್ದು, ಯಶಸ್ವಿ ಸೋಂಕು = ಸೋಂಕಿಗೆ ಒಡ್ಡಿಕೊಳ್ಳುವುದು / ಸಮಯ ( ಸಕ್ಸಸ್‌ಫುಲ್ ಇನ್‌ಫಿಕ್ಷೆನ್ = ಎಕ್ಸ್‌ಪೋಜರ್ ಟು ಇನ್‌ಫೆಕ್ಷನ್ / ಟೈಮ್ ) ಎಂಬ ಸಮೀಕರಣ ರಚಿಸಿ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ಬ್ರೊಮೇಜ್ ಪ್ರಕಾರ ಅತಿ ಹೆಚ್ಚು ಸೋಂಕಿತರಿರುವ ಪ್ರದೇಶದಲ್ಲಿ ನೀವು ಹೆಚ್ಚಿನ ಸಮಯ ಕಳೆದರೆ ಅಥವಾ ಸೋಂಕಿನ ಕಣಗಳು ಗಾಳಿ ಮೂಲಕವೂ ಪಸರಿಸುವುದರಿಂದ ಅಂಥ ಪರಿಸರದಲ್ಲಿ ನೀವು ಇದ್ದರೆ ಸೋಂಕಿಗೊಳಗಾಗುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಹೊರಗೆ ಇದ್ದಷ್ಟು ಅಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ.
ಹಲವು ಸಂಶೋಧಕರ ತಂಡ ಸೋಂಕಿತನ ನೇರ ಸಂಪರ್ಕದಿಂದ ವೈರಾಣು ಹರಡುತ್ತದೆ. ಇದು ಗಾಳಿಯಲ್ಲಿ ಜೀವಿಸಬಲ್ಲದು ಎಂದು ಈಗಾಗಲೇ ಕಂಡುಕೊಂಡಿದ್ದಾರೆ. ಇದೀಗ ಈ ಅಂಶವನ್ನು ಪುಷ್ಟಿಗೊಳಿಸುವ ಮತ್ತಷ್ಟು ಪುರಾವೆಗಳು ದೊರಕಿದ್ದು, ಉಸಿರಾಡಲು ಅಗತ್ಯ ಇರುವ ಗಾಳಿಯೇ ಉಸಿರಾಟವನ್ನು ನಿಲ್ಲಿಸುವ ಶಕ್ತಿಯನ್ನು ಹೊಂದಿದೆ ಎಂದು ಬ್ರೊಮೇಜ್ ಹೇಳಿದ್ದಾರೆ. ನಿರ್ದಿಷ್ಟ ಪ್ರಮಾಣದ ಸೋಂಕಿನ ಕಣಗಳಿಗೆ ಒಡ್ಡಿಕೊಂಡಾಗ ಸಹಜವಾಗಿಯೇ ಜನರು ಸೋಂಕಿಗೆ ತುತ್ತಾಗುತ್ತಾರೆ. ಸೋಂಕಿತ ವ್ಯಕ್ತಿ ಮಾತನಾಡುವಾಗ ಅಥವಾ ಉಸಿರಾಡುವಾಗ ಕೆಲ ಸೋಂಕಿನ ಕಣಗಳು ಗಾಳಿಯಲ್ಲಿ ವಿಲೀನವಾಗಿ ಸುತ್ತಮುತ್ತಲಿನ ಪರಿಸರದಲ್ಲಿ ದೀರ್ಘಕಾಲದವರೆಗೆ ಜೀವಿಸುತ್ತದೆ. ಹೀಗೆ ಗಾಳಿಯಿಂದಲೂ ಸೋಂಕು ಹರಡಬಹುದು ಎಂದು ತರ್ಕಿಸಲಾಗಿದೆ.
ಕೋವಿಡ್ ಸೋಂಕು ಹಾವಳಿ ಪ್ರಾರಂಭವಾದ ಬಳಿಕ ಮಾಸ್ಕ್, ಗ್ಲೌಸ್ ಮತ್ತು ಸ್ಯಾನಿಟೈಜರ್‌ಗೆ ಭಾರೀ ಬೇಡಿಕೆ ಬಂದಿದೆ ಹಾಗೂ ಇವುಗಳ ಉತ್ಪಾದನೆಯೂ ಹಲವು ಪಟ್ಟು ಹೆಚ್ಚಾಗಿದೆ. ಮಾಸ್ಕ್ ಅಂತೂ ಹಳ್ಳಿಹಳ್ಳಿಗಳಲ್ಲೂ ಮಾಟಾರವಾಗುತ್ತಿದೆ.