ವಿಶೇಷ ಬಾಹ್ಯಾಕಾಶ ಯೋಜನೆ ಗಳಿಗಾಗಿ ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಲು ವಿಜ್ಞಾನಿಗಳಿಗೆ ವಿಶೇಷ ಸೌಲತ್ತುಗಳು ಅಥವಾ ಹೆಚ್ಚವರಿ ಸಂಬಳ ಸಿಗುವುದಿಲ್ಲ. ಆದರೆ ಸಂಜೆ 5ರ ಅನಂತರವೂ ವಿಜ್ಞಾನಿಗಳು ಕೆಲಸ ಮಾಡುವಂತೆ ಪ್ರೇರಣೆ ಸಿಗಲು ಉಚಿತ ಮಸಾಲಾ ದೋಸೆ, ಫಿಲ್ಟರ್ ಕಾಫಿ ಕಾರಣವಾಯಿತು ಎಂದು ವಿಜ್ಞಾನಿ ವೆಂಕಟೇಶ್ವರ ಶರ್ಮಾ ಹೇಳಿದ್ದಾರೆ.
“ಚಂದ್ರಯಾನ-3 ಯೋಜನೆಯ ತಂಡದಲ್ಲಿ ಕಾರ್ಯ ನಿರ್ವಹಿಸುವ ವಿಜ್ಞಾನಿಗಳಿಗೆ ಅನುದಾನ ಬಳಸಿ ನಾವು ಪ್ರತೀ ದಿನ 5 ಗಂಟೆಗೆ ತಂಡದ ಸದಸ್ಯರಿಗೆ ಉಚಿತ ಮಸಾಲಾ ದೋಸೆ ಮತ್ತು ಫಿಲ್ಟರ್ ಕಾಫಿ ನೀಡಲು ಆರಂಭಿಸಿದೆವು. ಇದು ಎಲ್ಲರೂ ಹೆಚ್ಚು ಹೊತ್ತು ಸಂತೋಷದಿಂದ ಕೆಲಸ ಮಾಡಲು ಪ್ರೇರಣೆ ನೀಡಿತು. ಮುಖ್ಯವಾಗಿ ಪ್ರತಿಯೊಬ್ಬರಿಗೂ ಯೋಜನೆ ಮೇಲಿದ್ದ ಪ್ರೀತಿಯೇ ಯಶಸ್ಸಿಗೆ ಕಾರಣ’ ಎಂದು ವೆಂಕಟೇಶ್ವರ ಶರ್ಮಾ ತಿಳಿಸಿದ್ದಾರೆ.
Advertisement
“ಅಗತ್ಯಗಳಿಗಾಗಿ ಮಾತ್ರ ಇಸ್ರೋ ಹಣ ವ್ಯಯಿಸುತ್ತದೆ. ಬೇರೆ ಯಾವುದೇ ಭಾರತೀಯ ಅಥವಾ ವಿದೇಶಿ ಕಂಪೆನಿಗಳಿಂತ ನಮ್ಮ ವಿಜ್ಞಾನಿಗಳು ಹೆಚ್ಚಿನ ಶ್ರಮವನ್ನು ಹಾಕುತ್ತಾರೆ’ ಎಂದು ಇಸ್ರೋದ ನಿವೃತ್ತ ಮುಖ್ಯಸ್ಥ ಜಿ. ಮಾಧವನ್ ನಾಯರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.