Advertisement
ಮೇರಿ ಕೋಮ್ 48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಜಪಾನಿನ ತ್ಸುಬಸಾ ಕೊಮುರಾ ಅವರನ್ನು 5-0 ಅಂತರದಿಂದ ಮಣಿಸಿದರು. ಸೋತಿಯಾ ಲಾಥರ್ 57 ಕೆಜಿ ವಿಭಾ ಗದ ಸ್ಪರ್ಧೆಯಲ್ಲಿ ಉಜ್ಬೆಕಿಸ್ಥಾನದ ಯೊದ್ಗುರೊಯ್ ಮಿಜೇìವಾ ಅವರ ಆಕ್ರಮಣವನ್ನು ತಡೆದು ವಿಜಯಿ ಯಾದರು.
ಮೇರಿಗೆ 5ನೇ ಫೈನಲ್: ಈವರೆಗೆ ಏಶ್ಯನ್ ಬಾಕ್ಸಿಂಗ್ ಕೂಟದಲ್ಲಿ 6 ಸಲ ಸ್ಪರ್ಧಿಸಿರುವ ಮೇರಿ ಕೋಮ್, 5ನೇ ಸಲ ಪ್ರಶಸ್ತಿ ಸುತ್ತು ತಲುಪಿದಂತಾಗಿದೆ. ಇಲ್ಲಿ ಮೇರಿ ಕೋಮ್ ಗೆದ್ದರೆ ಭಾರತ 48 ಕೆಜಿ ವಿಭಾಗದಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಪಡೆದಂತಾಗುತ್ತದೆ. ಸತತ 5 ವರ್ಷಗಳ ಕಾಲ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಬಳಿಕ ಮೇರಿ ಕೋಮ್ ಈಗ 48 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದಾರೆ.
ರಾಜ್ಯಸಭಾ ಸದಸ್ಯೆಯೂ ಆಗಿರುವ, 35ರ ಹರೆಯದ ಮೇರಿ ಜಪಾನ್ ಆಟಗಾರ್ತಿ ವಿರುದ್ಧ ಮೊದಲು ರಕ್ಷಣಾತ್ಮಕ ತಂತ್ರ ಅನುಸರಿಸಿದರೂ ಬಳಿಕ ಆಕ್ರಮಣಕ್ಕಿಳಿದರು. ಇದರಿಂದ ಕೊಮುರಾ ಕಕ್ಕಾಬಿಕ್ಕಿಯಾದರು. ಸ್ಪರ್ಧೆ ಏಕಪಕ್ಷೀಯವಾಗಿ ಮುಗಿಯಿತು.
Related Articles
Advertisement