Advertisement

Loksabha; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿರುದ್ಯೋಗ, ಜಾತಿ ಗಣತಿ, ರಾಷ್ಟ್ರೀಯ ಭದ್ರತೆ ವಿಚಾರ

01:11 PM Apr 05, 2024 | Team Udayavani |

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದೆ. ಉದ್ಯೋಗ ಸೃಷ್ಟಿ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಜಾತಿ ಗಣತಿ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು.

Advertisement

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಾಥ್ ನೀಡಿದರು. ಮಾಜಿ ಸಚಿವ ಪಿ.ಚಿದಂಬರಂ ಅವರು ಪ್ರಣಾಳಿಕಾ ಸಮಿತಿಯ ಮುಖ್ಯಸ್ಥರಾಗಿದ್ದರು.

“ದೇಶದ ರಾಜಕೀಯ ಇತಿಹಾಸದಲ್ಲಿ ಈ ಪ್ರಣಾಳಿಕೆಯು ನ್ಯಾಯದ ದಾಖಲೆ ಪುಸ್ತಕವಾಗಿದೆ. ಭಾರತ್ ಜೋಡೊ ನ್ಯಾಯ್ ಯಾತ್ರೆಯ ಐದು ಸ್ತಂಭಗಳಿಂದ- ‘ಯುವ, ರೈತ, ಮಹಿಳೆ, ಕಾರ್ಮಿಕ ಮತ್ತು ಹಿಸ್ಸೆದಾರಿ ನ್ಯಾಯ’ 25 ಗ್ಯಾರಂಟಿಗಳು ಹೊರಹೊಮ್ಮುತ್ತವೆ ” ಎಂದು ಖರ್ಗೆ ಹೇಳಿದರು.

ಜಾತಿ ಗಣತಿ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜಾತಿಗಳು, ಉಪಜಾತಿಗಳು ಮತ್ತು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಗುರುತಿಸಲು ಮತ್ತು ಎಣಿಸಲು ರಾಷ್ಟ್ರವ್ಯಾಪಿ ಜನಗಣತಿಯನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದೆ. ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಅಂಚಿನಲ್ಲಿರುವ ಗುಂಪುಗಳಿಗೆ – ಅಂದರೆ ಪರಿಶಿಷ್ಟ ಜಾತಿ, ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಕೋಟಾದ ಮೇಲೆ ಶೇಕಡಾ 50 ರಷ್ಟು ಮಿತಿಯನ್ನು ಹೆಚ್ಚಿಸಲು ಪ್ರತಿಜ್ಞೆ ಮಾಡಿದೆ.

Advertisement

ರೈತರಿಗೆ ಕನಿಷ್ಠ ಬೆಂಬಲ ಬೆಲೆ

ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರಿಗೆ ಎಂಎಸ್‌ಪಿ ಅಥವಾ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೆ ತರುವುದಾಗಿ ಪಕ್ಷವು ಭರವಸೆ ನೀಡಿದೆ. ಎಂಎಸ್ ಪಿ ಸಮಸ್ಯೆಯು 2020 ರಿಂದ ರೈತರ ಪ್ರತಿಭಟನೆಯ ಪ್ರಮುಖ ಅಂಶವಾಗಿದೆ. ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದ ಸೂತ್ರದ ಆಧಾರದ ಮೇಲೆ ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಯಾದ ಎಂಎಸ್‌ಪಿಗೆ ಶಾಶ್ವತ ಕಾನೂನು ಖಾತರಿ ನೀಡುವುದಾಗಿ ಕಾಂಗ್ರೆಸ್ ಹೇಳಿದೆ.

ಬಡತನ ತೊಡೆದು ಹಾಕುತ್ತೇವೆ

ಮುಂದಿನ ದಶಕದಲ್ಲಿ 23 ಕೋಟಿ ಜನರ ಭವಿಷ್ಯವನ್ನು ಸುಧಾರಿಸುವ ಮೂಲಕ ಬಡತನವನ್ನು ತೊಡೆದುಹಾಕಲು ಪಕ್ಷವು ಭರವಸೆ ಮಾಡಿದೆ. ಚಿದಂಬರಂ ಬಿಜೆಪಿಯನ್ನು “ಶ್ರೀಮಂತರ, ಶ್ರೀಮಂತರಿಂದ ಮತ್ತು ಶ್ರೀಮಂತರ ಸರ್ಕಾರ” ಎಂದು ವಾಗ್ದಾಳಿ ನಡೆಸಿದರು ಮತ್ತು ಇದು “ಮೇಲಿನ 1 ಶೇಕಡಾ ಜನರ ಹಿತಾಸಕ್ತಿಗಳಿಂದ ನಡೆಸಲ್ಪಡುತ್ತದೆ” ಎಂದು ಹೇಳಿದರು.

“… ಆದರೆ ನಾವು ಕೆಳಗಿನ ಶೇಕಡಾ 50 ರಷ್ಟು ನೋಡುತ್ತೇವೆ. ಕೆಳಗಿನ ಶೇಕಡಾ 50 ರಷ್ಟು ಮುಖ್ಯವಾಗಿದೆ. ಈ ದೇಶದಲ್ಲಿ 23 ಕೋಟಿ ಜನರು ಇನ್ನೂ ಬಡವರು ಎಂದು ಅಂದಾಜಿಸಲಾಗಿದೆ. ಯುಪಿಎ 24 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿತು. 2024 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ 10 ವರ್ಷಗಳಲ್ಲಿ 23 ಕೋಟಿ ಜನರಿಂದ ಬಡತನ ರೇಖೆಯಿಂದ ಎತ್ತುತ್ತೇವೆಂದು ನಾವು ಭರವಸೆ ನೀಡುತ್ತೇವೆ” ಎಂದು ಚಿದಂಬರಂ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತೆ

ಚೀನಾದೊಂದಿಗಿನ ದೇಶದ ಗಡಿಯಲ್ಲಿ ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಮತ್ತು ಈ ಹಿಂದೆ ಎರಡೂ ಸೇನೆಗಳು ಗಸ್ತು ತಿರುಗುತ್ತಿದ್ದ ಪ್ರದೇಶಗಳನ್ನು ನಮ್ಮ ಸೈನಿಕರಿಗೆ ಮತ್ತೆ ಪ್ರವೇಶಿಸಬಹುದೆಂದು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವುದಾಗಿ ಪಕ್ಷ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next