Advertisement

ಮೇರಿ ಕೋಮ್‌ ಸ್ಫೂರ್ತಿ ಸೆಲೆ

07:13 PM Oct 11, 2019 | Lakshmi GovindaRaju |

ಅನುಭವಿ ಬಾಕ್ಸರ್‌, 6 ಬಾರಿಯ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್‌ ಭಾರತಕ್ಕೆ ವಿಶ್ವ ಬಾಕ್ಸಿಂಗ್‌ ಕೂಟದಲ್ಲಿ 7ನೇ ಸಲ ಚಿನ್ನದ ಪದಕ ಗೆದ್ದು ತರುವ ಸಮೀಪದಲ್ಲಿದ್ದಾರೆ. ಸದ್ಯ ರಷ್ಯಾದಲ್ಲಿ ಸಾಗುತ್ತಿರುವ ಕೂಟದಲ್ಲಿ ಮೇರಿ ಕೋಮ್‌ ಅಬ್ಬರದ ಆಟ ಪ್ರದರ್ಶಿಸಿದ್ದಾರೆ. ಮಹಿಳಾ ವಿಭಾಗದ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ ಹಂತಕ್ಕೆ ಪ್ರವೇಶಿಸಿದ್ದಾರೆ. ಕೋಟ್ಯಂತರ ಭಾರತೀಯರಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಮೇರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಬಳಿಕ ಈ ವಾರದಲ್ಲಿ ದೇಶಾದ್ಯಂತ ಮೇರಿ ಕೋಮ್‌ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ.

Advertisement

ಹೌದು.. ಗಂಡ, ಮಕ್ಕಳು, ಮನೆ, ಸಂಸಾರದ ನಡುವೆಯೂ ಸಾಧನೆ ಅಷ್ಟು ಸುಲಭದ ಮಾತಲ್ಲ. ಎಲ್ಲ ಸಮಸ್ಯೆಗಳನ್ನು ಮೇರಿ ಕೋಮ್‌ ಮೆಟ್ಟಿ ನಿಂತಿದ್ದಾರೆ. ಅವರ ಅಪ್ರತಿಮ ಪ್ರದರ್ಶನ, ತಾಳ್ಮೆ ಎಲ್ಲರಿಗೂ ಸ್ಫೂರ್ತಿ. ಮೇರಿ ಕೋಮ್‌ ದೇಶಕ್ಕಾಗಿ ಮತ್ತೂಂದು ಚಿನ್ನ ಗೆದ್ದರೆ ಒಟ್ಟಾರೆ ವಿಶ್ವ ಬಾಕ್ಸಿಂಗ್‌ನಲ್ಲಿ 7ನೇ ಸ್ವರ್ಣ ಪದಕ ಗೆದ್ದ ಮೊದಲ ಸಾಧಕಿ ಎನಿಸಿಕೊಳ್ಳಲಿದ್ದಾರೆ. 36 ವರ್ಷದ ಮೇರಿ ಕೋಮ್‌ ಕಳೆದ ವರ್ಷ ನವದೆಹಲಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಟೀಕಾಕಾರರಿಗೆ ಸರಿಯಾದ ಉತ್ತರವನ್ನೇ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next