ವನಿತಾ ಬಾಕ್ಸಿಂಗ್ ಟೂರ್ನಿಯ 48 ಕೆಜಿ ವಿಭಾಗದಲ್ಲಿ ಮೇರಿ ಕೋಮ್ ಕಜಾಕಿಸ್ಥಾನದ ಅಯಿಗೆರಿಮ್ ಕಸ್ಸಾನಯೇವಾ ಅವರನ್ನು 5-0 ಯಿಂದ ಸೋಲಿಸಿ ಪ್ರಸಕ್ತ ಋತುವಿನಲ್ಲಿ ಮೂರನೇ ಚಿನ್ನ ಗೆದ್ದರು. ಇದಕ್ಕೂ ಮುನ್ನ ಇಂಡಿಯನ್ ಓಪನ್ ಟೂರ್ನಿ, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಅವರು ಬಂಗಾರ ಬೇಟೆಯಾಡಿದ್ದರು. ಆದರೆ ಗಾಯಾಳಾಗಿ ಕಳೆದ ಜಕಾರ್ತಾ ಏಶ್ಯಾಡ್‌ನಿಂದ ದೂರ ಉಳಿದಿದ್ದರು. ಈಗ ಚಿನ್ನದೊಂದಿಗೆ ತಮ್ಮ ಪುನರಾಗಮನವನ್ನು ಭರ್ಜರಿಯಾಗಿ ಸಾರಿದ್ದಾರೆ.
Advertisement
ಮಾಜಿ ಒಲಿಂಪಿಕ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಸ್ಪರ್ಧೆಯುದ್ದಕ್ಕೂ ಎಚ್ಚರಿಕೆಯ ಹಾಗೂ ರಕ್ಷಣಾತ್ಮಕ ಆಟವಾಡಿ ಪ್ರತಿ ಸ್ಪರ್ಧಿಗೆ ಅಂಕ ಗಳಿಸಲು ಅವಕಾಶವನ್ನೇ ನೀಡಲಿಲ್ಲ.ಯುವ ವಿಭಾಗದ ದಾಖಲೆ
ಯುವ ವಿಭಾಗದ 55 ಕೆಜಿ ಸ್ಪರ್ಧೆಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಖ್ಯಾತಿಯ ಜ್ಯೋತಿ ಗುಲಿಯಾ ಚಿನ್ನದ ಪದಕ ಗೆದ್ದರು. ಇದು ಭಾರತಕ್ಕೆ ಯುವ ವಿಭಾಗದಲ್ಲಿ ಲಭಿಸಿದ ಮೊದಲ ಬಂಗಾರ. ಜ್ಯೋತಿ ಗುಲಿಯಾ ಆತಿಥೇಯ ನಾಡಿನ ಮಾಜಿ ವಿಶ್ವ ಚಾಂಪಿಯನ್ ತತಿಯಾನಾ ಪುಟಾ ಅವರನ್ನು ಸೋಲಿಸಿದರು. 17ರ ಹರೆಯದ ಜ್ಯೋತಿ ನವೆಂಬರ್ ನಲ್ಲಿ ಅರ್ಜೆಂಟಿನಾದಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ಸ್‌ಗೆ ಆಯ್ಕೆಯಾದ ಭಾರತದ ಏಕೈಕ ಬಾಕ್ಸರ್
ಆಗಿದ್ದಾರೆ.
ಈ ಟೂರ್ನಿಯಲ್ಲಿ ಕಿರಿಯ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ತೋರಿದ್ದು 6 ಚಿನ್ನ, 6 ಬೆಳ್ಳಿ, 1 ಕಂಚಿನ ಪದಕಗಳೊಂದಿಗೆ ಒಟ್ಟು 13 ಪದಕ ಗೆದ್ದಿದ್ದಾರೆ.
ಬಂಗಾರದ ಸಾಧಕರೆಂದರೆ ಭಾರತಿ (46 ಕೆಜಿ), ಸನ್ಯಾ ನೇಗಿ (48 ಕೆಜಿ), ಸಂದೀಪ್ ಕೌರ್ (52 ಕೆಜಿ), ನೇಹಾ (54 ಕೆಜಿ), ಅರ್ಶಿ ಖಾನಮ್ (57 ಕೆಜಿ) ಮತ್ತು ಕೋಮಲ್ (80 ಕೆಜಿ).