ಅಮ್ಮಾನ್ (ಜೋರ್ಡಾನ್): ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆಯುವ ಹಾದಿಯಲ್ಲಿರುವ ಭಾರತದ ಖ್ಯಾತ ಬಾಕ್ಸರ್‌ಗಳಾದ
ಮೇರಿ ಕೋಮ್ (51 ಕೆಜಿ) ಮತ್ತು ಅಮಿತ್ ಪಂಘಲ್ (52 ಕೆಜಿ) ಶನಿವಾರ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ಸುತ್ತಿನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.
6 ಬಾರಿಯ ವಿಶ್ವ ಚಾಂಪಿಯನ್ ಆಗಿರುವ 37ರ ಮೇರಿ ಕೋಮ್, 2ನೇ ಸಲ ಒಲಿಂಪಿಕ್ಸ್ ಅದೃಷ್ಟ ಪರೀಕ್ಷೆಗೆ ಇಳಿಯುವ ಸಿದ್ಧತೆಯಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಅವರ ಎದುರಾಳಿ ನ್ಯೂಜಿಲ್ಯಾಂಡಿನ ಟಾಸ್ಮಿನ್ ಬೆನ್ನಿ.
ಮೊದಲೆರಡು ಸುತ್ತುಗಳನ್ನು ದಾಟಿದರೆ ಮೇರಿಗೆ ಟೋಕಿಯೊ ಟಿಕೆಟ್ ಖಾತ್ರಿಯಾಗಲಿದೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹಿರಿಮೆ ಮೇರಿ ಕೋಮ್ ಅವರದಾಗಿದೆ.
ಅಮಿತ್ ಪಂಘಲ್ ಅವರಿಗೆ ಮೊದಲ ಸುತ್ತಿನ ಬೈ ಲಭಿಸಿದೆ.