ಹೊಸದಿಲ್ಲಿ: ರಾಷ್ಟ್ರೀಯ ಬಾಕ್ಸಿಂಗ್ ಶಿಬಿರಕ್ಕೆಂದು ಅಂತಿಮಗೊಳಿಸಲಾದ ಬಾಕ್ಸರ್‌ಗಳ ಯಾದಿಯಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಮತ್ತು ಏಶ್ಯಾಡ್ ಚಿನ್ನದ ಪದಕ ವಿಜೇತ ಅಮಿತ್ ಪಂಘಲ್ ಹೆಸರು ಕಾಣಿಸಿಕೊಂಡಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಲವ್ಲಿನಾ ಬೊರ್ಬೋಹೇನ್ ಸ್ಥಾನ ಪಡೆದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಪುರುಷರ ವಿಭಾಗದ 5 ಮಂದಿ ಬಾಕ್ಸರ್‌ಗಳಾದ ಮನೀಷ್ ಕೌಶಿಕ್, ಆಶಿಷ್ ಚೌಧರಿ, ವಿಕಾಸ್ ಕೃಷ್ಣನ್, ಸತೀಶ್ ಕುಮಾರ್ ಕೂಡ ಈ 52 ಮಂದಿಯ ಯಾದಿಯಲ್ಲಿಲ್ಲ. ಇವರಲ್ಲಿ ವಿಕಾಸ್ ಕೃಷ್ಣನ್ ಭುಜದ ನೋವಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ್ಯಾರೂ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳದ ಕಾರಣ ಶಿಬಿರಕ್ಕೆ ಆಯ್ಕೆಯಾಗಿಲ್ಲ ಎಂದು ಅಖೀಲ ಭಾರತ ಬಾಕ್ಸಿಂಗ್ ಫೆಡರೇಶನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವನಿತಾ ಶಿಬಿರದಲ್ಲಿ 49 ಮಂದಿ ಬಾಕ್ಸರ್‌ಗಳಿದ್ದಾರೆ. ಮಾಜಿ ಜೂ. ವಿಶ್ವ ಚಾಂಪಿಯನ್ ನಿಖತ್ ಜರೀನ್ (52 ಕೆಜಿ), ಏಶ್ಯನ್ ಚಾಂಪಿಯನ್ ಪೂಜಾ ರಾಣಿ (81 ಕೆಜಿ) ಪ್ರಮುಖರು. ಲವ್ಲಿನಾ ಬೊರ್ಗೊಹೇಮ್ ಕೂಡ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ, ಆದರೆ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತೆ ಎಂಬ ಕಾರಣಕ್ಕಾಗಿ ಆಯ್ಕೆ ಮಾಡಲಾಗಿದೆ.
ಮನೆಯಲ್ಲೇ ಮೇರಿ ಅಭ್ಯಾಸ:
ಈ ಸಂದರ್ಭದಲ್ಲಿ ಮೇರಿ ಕಾಮ್ ಅವರನ್ನು ಸಂಪರ್ಕಿಸಿದಾಗ, ತಾನೀಗ ಮನೆಯಲ್ಲೇ ಅಭ್ಯಾಸ ನಡೆಸುತ್ತಿದ್ದು, ವಿಶ್ವ ಚಾಂಪಯನ್‌ಶಿಪ್‌ಗೆ ಅಣಿಯಾಗಿತ್ತಿದ್ದೇನೆ ಎಂದಿದ್ದಾರೆ.
ಪುರುಷರ ಬಾಕ್ಸಿಂಗ್ ಶಿಬಿರ ಡಿ. 11ರಿಂದ 24ರ ತನಕ ಪಟಿಯಾಲಾದ “ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಪೋರ್ಟ್ಸ್’ನಲ್ಲಿ ನಡೆಯಲಿದೆ. ವನಿತಾ ಶಿಬಿರದ ತಾಣ ರೋಹ್ಟಕ್‌ನ ಸಾಯ್ ಸೆಂಟರ್.