Advertisement

ಪಾಕ್‌ ನ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿ ಮೇಲೆ ಗುಂಡಿನ ದಾಳಿ

11:01 AM Feb 25, 2023 | Team Udayavani |

ಕರಾಚಿ: ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿ ಮಾರ್ವಿಯಾ ಮಲ್ಲಿಕ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲು ಯತ್ನಿಸಿದ ಘಟನೆ ನಡೆದಿದೆ.

Advertisement

ಗುರುವಾರ ರಾತ್ರಿ (ಫೆ.23 ರಂದು) ಲಾಹೋರ್‌ ನ ನಿವಾಸದ ಹೊರಗೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್‌ ಅಪಾಯದಿಂದ ಮಾರ್ವಿಯಾ ಅವರು ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.

ತೃತೀಯ ಲಿಂಗಿ ಸಮುದಾಯದ ವಿರುದ್ಧ ಧ್ವನಿ ಎತ್ತಿದ ಕಾರಣ ಕಳೆದ ಕೆಲ ಸಮಯದಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ದಾಳಿಯ ಬಳಿಕ ಮಾರ್ವಿಯಾ ಪೊಲೀಸರಿಗೆ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಹಿಂದೂ ಪರಿಷತ್, ಬಜರಂಗದಳವನ್ನು ಉಗ್ರ ಸಂಘಟನೆ ಎಂದು ಘೋಷಿಸಿ; ಮೌಲಾನಾ ರಜಾ ಖಾನ್

ಸುರಕ್ಷತೆಯ ದೃಷ್ಟಿಯಿಂದ ಲಾಹೋರ್‌ ನಿಂದ ಬೇರೆಡೆ ತೆರಳಿದ್ದ ಮಾರ್ವಿಯಾ ಕಳೆದ ಕೆಲ ದಿನಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆಯೊಂದಕ್ಕೆ ಲಾಹೋರ್‌ ಗೆ ಬಂದಿದ್ದರು. ಅದೇ ವೇಳೆ ಈ ಘಟನೆ ಸಂಭವಿಸಿದೆ.

Advertisement

ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿಯಾಗಿ 2018 ರಲ್ಲಿ ಇತಿಹಾಸ ಬರೆದಿದ್ದರು. ಆ ದಿನದಿಂದ ಮಾರ್ವಿಯಾ ತೃತೀಯ ಲಿಂಗಿಯ ಸಮುದಾಯದ ಬಗ್ಗೆ ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ಕುಟುಂಬದ ಸಹಾಯವಿಲ್ಲದೆ, ಅಲ್ಲಿ, ಇಲ್ಲಿ ಕೆಲಸ ಮಾಡಿ ಶಿಕ್ಷಣವನ್ನು ಮುಗಿಸಿ ಕಷ್ಟದಿಂದ ಮೇಲೆ ಬಂದ ಮಾರ್ವಿಯಾ ಅವರನ್ನು ಪಾಕಿಸ್ತಾನದ ಸ್ಥಳೀಯ ಸುದ್ದಿ ವಾಹಿನಿ ಕೊಹಿನೂರ್​ ಸುದ್ದಿ ವಾಚಕಿಯ ಕೆಲಸಕ್ಕೆ ಆಯ್ಕೆ ಮಾಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next