Advertisement

ಡೀಸೆಲ್‌ ಕಾರನ್ನು ಸ್ಥಗಿತಗೊಳಿಸುವತ್ತ ಮಾರುತಿ

12:18 PM Nov 22, 2021 | Team Udayavani |

ನವದೆಹಲಿ: ಪ್ರಸಿದ್ಧ ಮೋಟಾರು ವಾಹನ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಡೀಸೆಲ್‌ ವಾಹನಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವತ್ತ ಹೆಜ್ಜೆ ಹಾಕುತ್ತಿದೆ.

Advertisement

ಹಾಗೆಯೇ ಪೆಟ್ರೋಲ್‌ ಇಂಜಿನ್‌ಗಳ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವತ್ತಲೂ ಹೆಚ್ಚಿನ ಗಮನ ಕೊಡಲಾಗುತ್ತಿದೆ. ಇತ್ತೀಚೆಗೆ ಸಂಸ್ಥೆ ಬಿಡುಗಡೆ ಮಾಡಿರುವ ಸೆಲೆರಿಯೋ ಕಾರು ಲೀಟರ್‌ಗೆ 26.68 ಕಿಮೀ ಮೈಲೇಜ್‌ನೊಂದಿಗೆ ದೇಶದಲ್ಲೇ ಅತ್ಯಂತ ಹೆಚ್ಚು ಮೈಲೇಜ್‌ ನೀಡುವ ಕಾರು(ಪೆಟ್ರೋಲ್‌) ಎನ್ನುವ ಖ್ಯಾತಿ ಪಡೆದುಕೊಂಡಿದೆ.

ಇದನ್ನೂ ಓದಿ:ಯಮಹಾ ವೈಜೆಡ್‌ಎಫ್ ಆರ್‌15ಎಸ್‌ ವಿ3.0 ಬಿಡುಗಡೆ

ಇದೇ ರೀತಿ ಸಂಸ್ಥೆಯ ಎಲ್ಲ ಕಾರುಗಳ ಇಂಜಿನ್‌ ಸಾಮರ್ಥ್ಯ ಹೆಚ್ಚಿಸುವತ್ತ ಸಂಸ್ಥೆ ಗಮನ ಕೊಡಲಿದೆ. ಮುಂದಿನ ವರ್ಷದಲ್ಲಿ ಇನ್ನಷ್ಟು ಬದಲಾವಣೆ ಮಾಡಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next