Advertisement

ಓವರ್‌ ಆರಂಭ…

08:00 PM Sep 01, 2019 | Sriram |

ಎಷ್ಟೋ ಸಲ ಕಾರು ಕೊಳ್ಳುವಾಗ ಅನೇಕ ಆಯ್ಕೆಗಳ ನಡುವೆ ಹೋಲಿಕೆ ಮಾಡುತ್ತೇವೆ. ಗಾತ್ರ, ಬೆಲೆ ಎಲ್ಲವನ್ನೂ ಅಳೆದು ತೂಗಿ ನೋಡುತ್ತೇವೆ. ಕೆಲವೊಮ್ಮೆ ಅತ್ತ ದೊಡ್ಡದಾದ ಎಸ್‌ಯುವಿಯೂ ಅಲ್ಲ ಇತ್ತ ಹ್ಯಾಚ್‌ಬ್ಯಾಕ್‌ ಕೂಡಾ ಅಲ್ಲದ ಗಾಡಿ ಸಿಕ್ಕರೆ ಚೆನ್ನಾಗಿತ್ತು ಎನ್ನಿಸುವುದುಂಟು. ಈ ಕೊರತೆಯನ್ನು ತುಂಬುವ ಸಲುವಾಗಿ, ಎರಡು ಕಾರುಗಳನ್ನು ಮಾದರಿಯಾಗಿಟ್ಟುಕೊಂಡು ತಯಾರಾಗುವ ಕಾರುಗಳಿಗೆ “ಕ್ರಾಸ್‌ ಓವರ್‌ ಕಾರು’ ಎನ್ನುತ್ತಾರೆ. ಅಂಥದ್ದೊಂದು ಕಾರನ್ನು ಮಾರುತಿ ಬಿಡುಗಡೆಗೊಳಿಸಿದೆ.

Advertisement

ಇನ್ನೋವಾ ಮತ್ತು ಎರ್ಟಿಗಾ ನಡುವೆ ಒಂದು ಫ್ಯಾಮಿಲಿ ಗಾಡಿ ಇದ್ದರೆ ಚೆನ್ನಾಗಿತ್ತು ಎಂಬುದು ಕಾರುಪ್ರಿಯರ ಕಡೆಯಿಂದ ಕೇಳಿಬರುವ ಮಾತು. “ಇನ್ನೋವಾ ಕ್ರೆಸ್ಟಾ’ ಬೆಲೆ ತೀರಾ ಹೆಚ್ಚು ಅಂತಾದರೆ, “ಎರ್ಟಿಗಾ’ ಮಧ್ಯಮ ವರ್ಗದ ಕೈಗೆಟುಕುವ ಬೆಲೆಯಲ್ಲಿ ಸಿಗ್ತಾ ಇದೆ. ಇದರ ನಡುವೆಯೇ ಈಗ ಮಾರುತಿ ಸುಜುಕಿಯೇ ಮತ್ತೂಂದು ಕಾರನ್ನು ಬಿಡುಗಡೆಗೊಳಿಸಿದೆ. ಇದು, ತನ್ನದೇ ಕಂಪನಿಯ ಎರ್ಟಿಗಾಗಿಂತ ಕೊಂಚ ಹೆಚ್ಚೇ ಸವಲತ್ತುಗಳೊಂದಿಗೆ ರೋಡಿಗಿಳಿಯಲು ಸಿದ್ಧವಾಗಿದೆ.

ಅಂದ ಹಾಗೆ, ಕಳೆದ ಬುಧವಾರವಷ್ಟೇ ಈ ಕಾರು ರಿಲೀಸ್‌ ಆಗಿದೆ. ಇದು ಮಾರುತಿ ಸುಜುಕಿಯ ಔಟ್‌ಲೆಟ್‌ಗಳಲ್ಲಿ ಸಿಗಲಿಕ್ಕಿಲ್ಲ. ಇದನ್ನು ನೆಕ್ಸಾ ಬ್ರಾಂಡ್‌ ಅಡಿಯಲ್ಲಿ ಹೊರಗೆ ತರಲಾಗುತ್ತಿದೆ. ಮಾರುತಿಯ “ಎಸ್‌- ಕ್ರಾಸ್‌’ ಕಾರಿನ ನಂತರದಲ್ಲಿ ರಸ್ತೆಗಿಳಿಯುತ್ತಿರುವ ಎರಡನೇ ಕ್ರಾಸ್‌ ಓವರ್‌ ಕಾರು ಇದಾಗಿದೆ. ಈ ಕಾರಿನ ಹೆಸರು - ಮಾರುತಿ ಸುಜುಕಿ ಎಕ್ಸ್‌ಎಲ್‌6.

2+2+2
ಇದು ಈ ಗಾಡಿಯ ವೈಶಿಷ್ಟ್ಯ. ಮುಂದುಗಡೆ ಸಾಲಿನಲ್ಲಿ ಚಾಲಕನನ್ನು ಸೇರಿಸಿ ಒಬ್ಬರು ಪ್ರಯಾಣಿಕರು, ಇವರ ಹಿಂದಿನ ಸಾಲಿನಲ್ಲಿ ಇಬ್ಬರು ಪ್ರಯಾಣಿಕರು, ಕಡೇ ಸಾಲಿನಲ್ಲಿ ಇನ್ನಿಬ್ಬರು ಕುಳಿತುಕೊಳ್ಳಬಹುದು. ಎರ್ಟಿಗಾಗಿಂತ ಕೊಂಚ ಭಿನ್ನವಾಗಿ ರೂಪಿಸಬೇಕು ಎಂಬ ಕಾರಣಕ್ಕಾಗಿಯೇ ಈ ಕಾರನ್ನು 2+2+2 ಲೆಕ್ಕಾಚಾರದಲ್ಲೇ ಸ್ಟೈಲಿಷ್‌ ಆಗಿ ಡಿಸೈನ್‌ ಮಾಡಲಾಗಿದೆ. ಹೀಗಾಗಿಯೇ ಈ ಎಂಪಿವಿ (ಮಲ್ಟಿ ಪರ್ಪಸ್‌ ವೆಹಿಕಲ್‌)ಗೆ ಎಕÕ…ಎಲ…6 ಎಂಬ ಹೆಸರನ್ನು ಇಡಲಾಗಿದೆ.

ಪೆಟ್ರೋಲ್‌ ಎಂಜಿನ್‌ ಮಾತ್ರ
ಸಾಮಾನ್ಯವಾಗಿ ಕಾರುಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಆವೃತ್ತಿ ಎರಡರಲ್ಲೂ ಲಭ್ಯವಾಗುತ್ತವೆ. ಆದರೆ ಎಲ್‌ಎಕ್ಸ್‌6 ಕಾರು ಪೆಟ್ರೋಲ್‌ ಎಂಜಿನ್‌ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಡೀಸೆಲ್‌ ಆವೃತ್ತಿಯಲ್ಲಿ ಬರುತ್ತಿಲ್ಲ. ಸರ್ಕಾರದ ಹಾಲಿ ಬಿಎಸ್‌6 ನಿಯಮಾವಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಕಾರು ಸಿದ್ಧಗೊಂಡಿದ್ದು, 5 ಗೇರುಗಳನ್ನು ಒಳಗೊಂಡಿದೆ. ಆಟೋಮ್ಯಾಟಿಕ್‌ ಮತ್ತು ಮ್ಯಾನ್ಯುಯಲ್‌ ಆಯ್ಕೆಗಳಲ್ಲಿ ಒಂದನ್ನು ಗ್ರಾಹಕರು ಆರಿಸಿಕೊಳ್ಳಬಹುದಾಗಿದೆ.

Advertisement

ಕಾರಿನ ಬೆಲೆ
ಈ ಕಾರಿನಲ್ಲಿ ಲೋವರ್‌ ಎಂಡ್‌ ಇಲ್ಲ. ಕೇವಲ ಮಿಡಲ್‌ ಮತ್ತು ಹೈಯರ್‌ ಎಂಡ್‌ ಮಾತ್ರ. ಮಿಡಲ್‌ ಎಂಡ್‌, ಅಂದರೆ ಝೆಟಾ ಸರಣಿಯ ಕಾರುಗಳು. ಅವುಗಳ ಬೆಲೆ 9,79,689 ರು.ಗಳಿಂದ ಆರಂಭವಾಗುತ್ತದೆ. ಇನ್ನು ಹೈಯರ್‌ ಎಂಡ್‌, ಆಲ್ಫಾ ಮಾಡೆಲ್‌ನ ಬೆಲೆ 10,36,189 ರು.ನಷ್ಟಿದೆ. ಅದಕ್ಕಿಂತ ಮಿಗಿಲಾಗಿ ಆಟೋಮ್ಯಾಟಿಕ್‌ ಮತ್ತು ಮ್ಯಾನುಯಲ್‌ ಮಾಡೆಲ್‌ಗ‌ಳ ದರಗಳೂ ಬದಲಾವಣೆಯಾಗುತ್ತದೆ.
ಝೆಟಾ ಎಂ.ಟಿ – 9,79,689
ಝೆಟಾ ಎ.ಟಿ – 10,89,689
ಆಲ್ಫಾ ಎಂ.ಟಿ – 10,36,189
ಆಲ್ಫಾ ಎ.ಟಿ – 11,46,189

ಯುರೋಪಿಯನ್‌ ಇಂಟೀರಿಯರ್‌
ಸಂಸ್ಥೆಯು ಯೂರೋಪಿಯನ್‌ ಟೆಕ್ನಾಲಜಿಯನ್ನು ಗಮನದಲ್ಲಿರಿಸಿಕೊಂಡು ಗಾಡಿಯ ಒಳಾಂಗಣ ವಿನ್ಯಾಸ ಮಾಡಿದೆ. ಪೂರ್ತಿ ಕಪ್ಪು ಬಣ್ಣದ ಇಂಟೀರಿಯರ್‌ ಕಾರಿಗೆ ವಿಶಿಷ್ಟ ಶೈನೀ ಲುಕ್‌ ಕೊಟ್ಟಿದೆ. ಮ್ಯೂಸಿಕ್‌ ಸಿಸ್ಟಮ್‌ “ಸ್ಮಾರ್ಟ್‌ ಪ್ಲೇ ಸ್ಟುಡಿಯೋ’ ಅನ್ನು ಒಳಗೊಂಡಿದೆ. ಸ್ಟೇರಿಂಗ್‌ನಲ್ಲೇ ಮ್ಯೂಸಿಕ್‌ ಸಿಸ್ಟಮ್‌ ಅನ್ನು ನಿಯಂತ್ರಿಸುವ ವ್ಯವಸ್ಥೆ ನೀಡಲಾಗಿದೆ. ಅಲ್ಲದೆ, ಒಟ್ಟು ಆರು ವಿವಿಧ ಕಲರ್‌ಗಳಲ್ಲಿ ಕಾರು ಲಭ್ಯವಾಗಲಿದೆ. ಈ ಕಾರ್‌ನ ಎತ್ತರ 170 ಸೆ.ಮೀ. ಇದ್ದು, ಅಗಲ 177.5 ಸೆ.ಮೀ. ಇದೆ. ಉದ್ದ 444.5 ಸೆ.ಮೀ. ಆಗಿದೆ.

1462 ಸಿಸಿ
103 ಬಿಎಚ್‌ಪಿ
ಮೈಲೇಜ್‌- 19.34 ಓMಕಏ
45 ಲೀ. ಪೆಟ್ರೋಲ್‌ ಟ್ಯಾಂಕ್‌
5 ಗೇರ್‌ಗಳು(ಚಿತ್ರ)
ಆಲಾಯ್‌ ವೀಲ್ಸ್‌(ಚಿತ್ರ)

-ಸೋಮಶೇಖರ ಸಿ. ಜೆ.

Advertisement

Udayavani is now on Telegram. Click here to join our channel and stay updated with the latest news.

Next