Advertisement
ವಿಶೇಷವಾಗಿ ಪುಟ್ಟ ಕಾರುಗಳತ್ತ ಜನರು ಮನಸ್ಸು ಮಾಡುತ್ತಿದ್ದರು. ಆದರೆ ಈಗ ಅವುಗಳನ್ನು ಕೊಂಡುಕೊಳ್ಳಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಸಣ್ಣ ಗಾತ್ರದ ಕಾರುಗಳಾದ ಆಲ್ಟೋ, ಹಳೆ ಮಾದರಿಯ ವ್ಯಾಗ್ನರ್ಗಳು ಸೇರಿದಂತೆ ಶೇ .69.3 ಇಳಿಕೆ ಕಂಡು ಬಂದಿದೆ. ಇನ್ನು ಇತ್ತೀಚೆಗೆ ಮಾರುಕಟ್ಟೆ ಕಂಡ ಹೊಸ ವ್ಯಾಗ್ನರ್, ಇಗ್ನಿಸ್, ಬಲೆನೋ ಮತ್ತು ಸ್ವಿಫ್ಟ್ ಕಾರುಗಳ ಮಾರುಕಟ್ಟೆಯಲ್ಲೂ ಶೇ.23ರಷ್ಟು ಇಳಿಕೆ ಕಂಡಿದೆ.
ಇತ್ತೀಚೆಗೆ ಕಾರುಗಳ ಜಿಎಸ್ಟಿ ಏರಿಕೆಯಾಗಿದ್ದು ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಗ್ರಾಹಕರು ಜಿಎಸ್ಟಿ ಮೊತ್ತ ಕಡಿಮೆಯಾಗಲು ಕಾಯುತ್ತಿದ್ದಾರೆ. ಮಾತ್ರವಲ್ಲದೇ ವಾಹನಗಳನ್ನು ಕೊಂಡುಕೊಳ್ಳುವಾಗ ಈ ಹಿಂದೆ ಇದ್ದ ವಿಮೆ ನೀತಿ ಈಗ ಬದಲಾಗಿದೆ. ವಿಮೆಯ ದರಗಳೂ ಹೆಚ್ಚಾಗಿದ್ದು ಒಟ್ಟಾರೆಯಾಗಿ ದುಂದು ವೆಚ್ಚಗಳು ಎಂಬ ಧೋರಣೆ ಗ್ರಾಹಕರಲ್ಲಿದೆ. ಈ ಎಲ್ಲಾ ಕಾರಣಗಳಿಂದ ಇಂದು ದೇಶದ ಕಾರು ಮಾರುಕಟ್ಟೆ ಕುಸಿತದ ಹಾದಿ ಕಂಡಿದೆ. ಕೇವಲ ಮಾರುತಿ ಸುಜುಕಿ ಮಾತ್ರ ನಷ್ಟದ ಹಾದಿಯಲ್ಲಿ ಇಲ್ಲ. ಅದರ ಸಾಲಿನಲ್ಲಿ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಕಾರು ತಯಾರಕ ಸಂಸ್ಥೆಗಳಿವೆ. ಭಾರತದಲ್ಲಿ ಮಾರುತಿ ಅತೀ ಹೆಚ್ಚು ಮಾರುಕಟ್ಟೆ ಪಾಲು ಹೊಂದಿದ ಕಾರಣ ಮಾರುತಿ ಸಂಸ್ಥೆ ಹೆಚ್ಚು ನಷ್ಟಗೊಳಗಾಗಿದೆ.