ಮುಂಬಯಿ: ಬಹುನಿರೀಕ್ಷಿತ ಕಾರು ಎಸ್ ಪ್ರಸ್ಸೋವನ್ನು ಮಾರುತಿ ಸುಝುಕಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟ ಕಡಿಮೆಯಿದ್ದರೂ, ಈ ಮಾಡೆಲ್‌ನ ಕಾರು ಬಿಡುಗಡೆ ಮೂಲಕ ಮಾರುತಿ ಸುಝುಕಿ ಉತ್ತಮ ಗ್ರಾಹಕ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದೆ.
ಎಸ್ ಪ್ರಸ್ಸೋ ಭಾರತದ ರಸ್ತೆಗಳಿಗೆ ಪೂರಕವಾಗಿರುವಂತೆ ನಿರ್ಮಿಸಲಾಗಿದ್ದು, ರೆನೋ ಕ್ವಿಡ್‌ನ ರೀತಿ ಎಸ್‌ಯುವಿ ವಿನ್ಯಾಸವನ್ನು ಹೊಂದಿದೆ. ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಇದೆ. ಮಾರುತಿ ಸುಝುಕಿಯ ಹರ್ಟೆಕ್ಟ್ ಫ್ಲಾಟ್‌ಫಾರಂನಿಂದ ಈ ವಾಹನ ವಿನ್ಯಾಸವಾಗಿದೆ. ಒಟ್ಟು 5 ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಬೆಲೆ 3.69 ಲಕ್ಷ ರೂ.ಗಳಿಂದ (ಎಕ್ಸ್‌ಷೋರೂಂ)ನಿಂದ ಆರಂಭವಾಗುತ್ತದೆ.
ಈ ಕಾರು ಕೂಡ 1 ಲೀಟರ್‌ನ ಕೆ ಸೀರೀಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68 ಎಚ್‌ಪಿ ಶಕ್ತಿ, 90 ಎನ್‌ಎಂ ಟಾರ್ಕ್ ಹೊಂದಿದೆ. ಕಾರು ಒಟ್ಟು 3565 ಎಂ.ಎಂ. ಉದ್ದ ಹೊಂದಿದ್ದು, 1520 ಎಂ.ಎಂ. ಅಗಲವಿದೆ. 240 ಲೀ. ಡಿಕ್ಕಿ ಹೊಂದಿದೆ.
ಎಲ್ಲ ಮಾದರಿಗಳಲ್ಲಿ ಎಬಿಎಸ್, ಡ್ರೈವರ್ ಸೈಡ್ ಏರ್‌ಬ್ಯಾಗ್, ಪಾರ್ಕಿಂಗ್ ಸೆನ್ಸರ್, ಸೀಟ್ ಬೆಲ್ಟ್ ರಿಮೈಂಡರ್, ಓವರ್‌ಸ್ಪೀಡ್ ರಿಮೈಂಡರ್ ಸಾಮಾನ್ಯವಾಗಿವೆ. ಡ್ಯಾಶ್‌ಬೋರ್ಡ್ ಮಧ್ಯೆ ಡಿಜಿಟಲ್ ಇನ್‌ಸ್ಟ್ರೆಮೆಂಟಲ್ ಕ್ಲಸ್ಟರ್ ಇದೆ. 7 ಇಂಚಿನ ಇನ್ಫೋಎಂಟರ್‌ಟೈನ್‌ಮೆಂಟ್ ವ್ಯವಸ್ಥೆ ಹೊಂದಿದೆ. ಶೇ.98ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಸಿ ಕಂಪೆನಿ ಈ ಕಾರನ್ನು ನಿರ್ಮಾಣ ಮಾಡಿದ್ದು, ಒಟ್ಟು 640 ಕೋಟಿ ರೂ.ಗಳನ್ನು ಕಾರು ನಿರ್ಮಾಣ ಯೋಜನೆಗೆ ವ್ಯಯಿಸಿದೆ.