Advertisement

ಮಾರುತಿ: ಮತ್ತೆ ಡೀಸೆಲ್‌ ಕಾರ್‌? ಉತ್ಪಾದನೆ ಇಲ್ಲ ಎಂಬ ನಿರ್ಣಯ ಮರು ಪರಿಶೀಲನೆ

10:25 AM Dec 15, 2019 | Hari Prasad |

ಮುಂಬಯಿ: ದೇಶದ ಪ್ರಮುಖ ಕಾರು ಉತ್ಪಾದನ ಸಂಸ್ಥೆ ಮಾರುತಿ ಸುಜುಕಿ ಡೀಸೆಲ್‌ ಕಾರುಗಳ ಉತ್ಪಾದನೆ ಮಾಡುವುದಿಲ್ಲವೆಂದು ಘೋಷಿಸಿತ್ತು. ಆದರೆ ಅದು ತನ್ನ ನಿರ್ಧಾರ ಬದಲು ಮಾಡಿಕೊಳ್ಳುವ ಸಾಧ್ಯತೆ ಇದೆ.

Advertisement

ಇತರ ಕಾರು ಕಂಪೆನಿಗಳು ಆ ರೀತಿಯ ನಿರ್ಧಾರ ಮಾಡಿಕೊಳ್ಳದೆ, 2020ರ ಎ. 1ರಿಂದ ಬಿಎಸ್‌ 6 ಮಾದರಿಯ ಹೊಸ ಎಂಜಿನ್‌ ಅಭಿ ವೃದ್ಧಿಯತ್ತ ಆಸಕ್ತಿ ತೋರಿವೆ. ಅದನ್ನು ಅಳವಡಿಸಿಕೊಳ್ಳದೆ, ಡೀಸೆಲ್‌ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ದೇಶದ ಕಾರು ಮಾರುಕಟ್ಟೆಯಲ್ಲಿರುವ ಅಗ್ರಸ್ಥಾನ ಕಳೆದುಕೊಳ್ಳಬೇಕಾದೀತು ಎಂದು ಕಂಪೆನಿ ಅಭಿಪ್ರಾಯ ಪಟ್ಟಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ ‘ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಆ ವರದಿಯ ಪ್ರಕಾರ ಮಾರುತಿ ಸುಜುಕಿ ಬಿಎಸ್‌ 6 ಮಾದರಿಯ 1.5 ಲೀಟರ್‌ ಸಾಮರ್ಥ್ಯದ ಎಂಜಿನ್‌ ಅಭಿವೃದ್ಧಿ ಶುರು ಮಾಡಿದೆ. ಹ್ಯುಂಡೈ, ಟಾಟಾ ಮೋಟರ್ಸ್‌ ಈಗಾಗಲೇ ಮಧ್ಯಮ ವರ್ಗದ ಕಾರುಗಳಿಗಾಗಿ ಎಂಜಿನ್‌ ಅಪ್‌ಡೇಟ್‌ ಮಾಡಿವೆ.

ಸಿಯಾಜ್‌, ಎರ್ಟಿಗಾ, ಎಸ್‌-ಕ್ರಾಸ್‌ಗಳಲ್ಲಿ ಅದನ್ನು ಅಳವಡಿಸಲಾಗುತ್ತದೆ. ಅನಂತರ ವಿಟಾರಾ ಬ್ರೆಝಾ ಸೇರಿದಂತೆ ಹಲವು ಕಾರುಗಳಲ್ಲಿ ಅಳವಡಿಕೆಯಾಗಲಿದೆ. ಇದರ ಜತೆಗೆ ಸಿಎನ್‌ಜಿ ಅಥವಾ ಹೈಬ್ರಿಡ್‌ ಆವೃತ್ತಿಯ ಕಾರುಗಳತ್ತಲೂ ಮಾರುತಿ ಮುಂದಾಗಿದೆ ಎಂದಿದೆ.

ವಿಟಾರಾ ಬ್ರೆಝಾ, ಡಿಸೈರ್‌ ಕಾರುಗಳನ್ನು ಹೊರತುಪಡಿಸಿ ಉಳಿದಂತೆ ಮಾರುತಿ ತನ್ನ ಇತರ ಬಿಎಸ್‌ 4 ಎಂಜಿನ್‌ನ ಡೀಸೆಲ್‌ ಕಾರು ಗಳನ್ನು ಹಂತ ಹಂತವಾಗಿ ನಿಲ್ಲಿಸುತ್ತಾ ಬರುತ್ತಿದೆ. ಉಳಿದಂತೆ ರೆನೋ-ನಿಸಾನ್‌, ಹ್ಯುಂಡೈ, ಮಹೀಂದ್ರಾ, ಟಾಟಾ ಮೋಟರ್ಸ್‌ ಮತ್ತು ಹೋಂಡಾ ಕಾರ್ಸ್‌ ಈಗಾಗಲೇ ಬಿಎಸ್‌ 6 ಮಾದರಿಯ ಎಂಜಿನ್‌ಗಳತ್ತ ದೃಷ್ಟಿ ಹಾಯಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next