Advertisement

‘ಮಾರುತಿ’ಮಾರಾಟ ಹೆಚ್ಚು

12:34 PM Nov 03, 2019 | Hari Prasad |

ಹೊಸದಿಲ್ಲಿ: ದೇಶೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆ, ಅಕ್ಟೋಬರ್‌ ತಿಂಗಳಲ್ಲಿ ಶೇ. 4.5ರಷ್ಟು ಬೆಳವಣಿಗೆ ದಾಖಲಿಸಿದೆ. ಕಳೆದ ತಿಂಗಳು 1,53,435 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಕಂಪೆನಿ ಹೇಳಿಕೊಂಡಿದೆ. ಅವುಗಳಲ್ಲಿ ವಿದೇಶಗಳಿಗೆ ರಫ್ತು ಮಾಡಲಾದ ವಾಹನಗಳೂ ಸೇರಿವೆ ಎಂದು ಕಂಪೆನಿ ಹೇಳಿದೆ.

Advertisement

ಹೊಸ ವ್ಯಾಗನ್‌ ಆರ್‌, ಸೆಲೆರಿಯೊ, ಇಗ್ನಿಸ್‌, ಸ್ವಿಫ್ಟ್, ಬಲೇನೊ, ಡಿಜೈರ್‌ ಕಾರುಗಳು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಟ್ಟು 64,789 ಮಾರಾಟವಾಗಿದ್ದರೆ ಈ ಅಕ್ಟೋಬರ್‌ನಲ್ಲಿ ಅದರ ಸಂಖ್ಯೆ 75,094ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next