Advertisement

ನಂ.1 ಸ್ಥಾನಕ್ಕೆ ಮಾರುತಿ ಕಣ್ಣು; ಭಾರತದ ಇ-ಕಾರು ಉತ್ಪಾದನ ವಲಯದ ದಿಗ್ಗಜನಾಗುವ ಹಂಬಲ

03:07 PM Apr 18, 2022 | Team Udayavani |

ಹೊಸದಿಲ್ಲಿ: ದೇಶದ ಕಾರು ಉತ್ಪಾದನಾ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ಏರುವುದೇ ಆದ್ಯತೆ ಎಂದು ಮಾರುತಿ ಸುಜುಕಿಯ ನೂತನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಿಸಾಶಿ ಟಕ್ಯುಶಿ ಹೇಳಿದ್ದಾರೆ.

Advertisement

“ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶ­ನ­ದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ವಿದ್ಯುತ್‌ ಚಾಲಿತ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದನ್ನು ಆಧರಿಸಿ 2025ರ ಒಳಗಾಗಿ ಮೊದಲ ವಿದ್ಯುತ್‌ ವಾಹನ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಅದಕ್ಕೆ ಪೂರಕವಾಗಿ ವೈವಿಧ್ಯಮಯ ವಿದ್ಯುತ್‌ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿರುವು­ದಾಗಿ ಅವರು ಹೇಳಿದ್ದಾರೆ.

“ಭಾರತದ ವಿದ್ಯುತ್‌ ಚಾಲಿತ ಕಾರು ತಯಾರಿಕಾ ರಂಗದಲ್ಲಿ ಮಾರುತಿ ಸುಜುಕಿಯನ್ನು ಅಗ್ರಮಾನ್ಯ ಕಂಪೆನಿಯನ್ನಾಗಿ ರೂಪಿಸುವುದು ನಮ್ಮ ಮುಂದಿನ ಗುರಿ. ಸದ್ಯದ ಸ್ಪರ್ಧೆಯಲ್ಲಿ ಮಾರುತಿ ತುಸು ಹಿಂದಿದ್ದರೂ ಮುಂದೆ ನಮ್ಮನ್ನು ನಾವು ಮೊದಲಿಗರಾಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಫೋರ್ಡ್‌ ಘಟಕಗಳಲ್ಲಿ ಟಾಟಾ ಕಾರು ತಯಾರು
ಗುಜರಾತ್‌ನ ಸಾನಂದ್‌ನಲ್ಲಿರುವ ತಾನು ಈಗಾಗಲೇ ಕೊಂಡು ಕೊಂಡಿರುವ ಫೋರ್ಡ್‌ ಕಂಪೆನಿಯ ಕಾರು ತಯಾರಿಕ ಘಟಕದಲ್ಲಿ 2000 ಕೋಟಿ ರೂ. ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಟಾಟಾ ಕಂಪೆನಿ ತಿಳಿಸಿದೆ. ಈ ಘಟಕವನ್ನು ವಿದ್ಯುತ್‌ ಚಾಲಿತ ಕಾರು ತಯಾರಿಕ ಘಟಕವನ್ನಾಗಿ ಪರಿವರ್ತಿಸಿ ವರ್ಷಕ್ಕೆ 2 ಸಾವಿರ ಇ-ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿರುವುದಾಗಿ ಟಾಟಾ ಕಂಪೆನಿ ಹೇಳಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next