Advertisement

ಉತ್ಪಾದನೆ ಸ್ಥಗಿತಗೊಳಿಸಿದ್ದ ಮಾರುತಿಯಿಂದ ಮತ್ತೆ ಡೀಸೆಲ್‌ ಕಾರುಗಳ ಉತ್ಪಾದನೆ

07:39 PM Dec 13, 2020 | sudhir |

ನವದೆಹಲಿ: ಕೇಂದ್ರ ಸರ್ಕಾರದ “ಬಿಎಸ್‌-6′ ಮಾಲಿನ್ಯ ನಿಯಮಾವಳಿ ಜಾರಿಗೆ ಬಂದ ಮೇಲೆ ಡೀಸೆಲ್‌ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ್ದ ಮಾರುತಿ ಸುಝುಕಿ, ಮುಂದಿನ ವರ್ಷದ ಮಾರುಕಟ್ಟೆಗೆ ವಿನೂತನ ಮಾರ್ಪಾಡುಗಳೊಂದಿಗೆ ಡೀಸೆಲ್‌ ಕಾರುಗಳನ್ನು ಪರಿಚಯಿಸುತ್ತಿದೆ.

Advertisement

ಬಿಎಸ್‌- 6 ಡೀಸೆಲ್‌ ಎಂಜಿನ್‌ ಗುಣಮಟ್ಟದ ಕಾರು ಇದಾಗಿದ್ದು, ಕಡಿಮೆ ಪ್ರಮಾಣದ ಕಾರ್ಬನ್‌ ಹೊರಸೂಸುವ ವ್ಯವಸ್ಥೆ ಹೊಂದಿರಲಿದೆ.

ಎಸ್‌ಯುವಿ ಮತ್ತು ವಿವಿಧೋದ್ದೇಶದ ವಾಹನಗಳ ವಿಭಾಗದಲ್ಲಿ ಡೀಸೆಲ್‌ ಕಾರುಗಳನ್ನು ಉತ್ಪಾದಿಸಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಇದಕ್ಕಾಗಿ ಗುರುಗಾಂವ್‌ನ ಮಾಣೆಸರ್‌ ಘಟಕದಲ್ಲಿ ತಯಾರಿಕೆ ಆರಂಭಗೊಂಡಿದೆ.

2021ರ ಏಪ್ರಿಲ್‌ನಲ್ಲಿ ಬಿಎಸ್‌- 6 ಎಂಜಿನ್‌ ಆಧಾರಿತ ಡೀಸೆಲ್‌ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಇದರೊಂದಿಗೆ ಮಾರುತಿ ಎರಿಟಿಗಾ, ವಿಟಾರಾ ಬ್ರೆಝಾ ಮಾದರಿಗಳನ್ನೂ ಬಿಎಸ್‌- 6 ಎಂಜಿನ್‌ ವಿಭಾಗದಲ್ಲಿ ಪರಿಚಯಿಸಲೂ ಸಂಸ್ಥೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next