Advertisement

ಅಂತ್ಯಸಂಸ್ಕಾರದ ಹೊತ್ತಲ್ಲೇ ಯೋಧನ ಪತ್ನಿಗೆ ಹೆರಿಗೆ

07:15 AM Oct 24, 2018 | Karthik A |

ಜಮ್ಮು: ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ ಪತಿಯ ಚಿತೆಗೆ ಅಗ್ನಿಸ್ಪರ್ಶವಾಗಲು ಕೆಲವೇ ಕ್ಷಣಗಳು ಬಾಕಿಯಿರುವಾಗ ಆ ಯೋಧನ ಪತ್ನಿಯು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. 10 ವರ್ಷಗಳ ಬಳಿಕ ದಂಪತಿಗೆ ಮಗು ಹುಟ್ಟಿದ್ದು, ಆ ಸಂಭ್ರಮವನ್ನು ಆಚರಿಸುವ ಸ್ಥಿತಿಯಲ್ಲಿ ಕುಟುಂಬವಿರಲಿಲ್ಲ.

Advertisement

ರವಿವಾರ ರಜೌರಿಯಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುಕೋರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಲ್ಯಾನ್ಸ್‌ ನಾಯಕ್‌ ರಂಜೀತ್‌ ಸಿಂಗ್‌ ಕುಟುಂಬದ ನೋವಿನ ಕಥೆಯಿದು. 36 ವರ್ಷದ ಯೋಧ ರಂಜೀತ್‌ರ ಪಾರ್ಥಿವ ಶರೀರ ಸೋಮವಾರ ಸುಲಿಗಾಮ್‌ ಗ್ರಾಮಕ್ಕೆ ಬಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಗಳವಾರ ಬೆಳಗ್ಗೆ ಇವರ ಅಂತ್ಯಸಂಸ್ಕಾರ ನಡೆಸಲು ಎಲ್ಲ ಸಿದ್ಧತೆ ನಡೆದಿತ್ತು. ಸೋಮವಾರ ಮಧ್ಯರಾತ್ರಿ ವೇಳೆಗೆ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಗ್ಗೆ ಪತಿಯ ಚಿತೆಗೆ ಅಗ್ನಿಸ್ಪರ್ಶ ಆಗುವ ಸ್ವಲ್ಪ ಹೊತ್ತಿಗೆ ಮುಂಚೆ ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದರು. ನವಜಾತ ಶಿಶು ಹಾಗೂ ಬಾಣಂತಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು, ಪತಿಯ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಶಿಶುವನ್ನು ಹಿಡಿದು ಪತಿಯ ಪಾರ್ಥಿವ ಶರೀರದ ಮುಂದೆ ಪತ್ನಿ ನಿಂತಿದ್ದ ಹೃದಯ ವಿದ್ರಾವಕ ದೃಶ್ಯವನ್ನು ನೋಡಿ ಅಲ್ಲಿದ್ದವರ ಕಣ್ಣಾಲಿಗಳು ತುಂಬಿಬಂದವು.

Advertisement

Udayavani is now on Telegram. Click here to join our channel and stay updated with the latest news.

Next