Advertisement

‘ಮಾರ್ಟಿನ್’ಮಾಸ್ ಲುಕ್ ಗೆ ಧ್ರುವ ಅಭಿಮಾನಿಗಳು ಫಿದಾ

01:33 PM Aug 15, 2021 | Team Udayavani |

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎ.ಪಿ ಅರ್ಜುನ್ ಕಾಂಬಿನೇಷನ್ ನಲ್ಲಿ ರೆಡಿಯಾಗುತ್ತಿರುವ ಹೊಸ ಚಿತ್ರದ ಮೋಷನ್ ಪೋಸ್ಟರ್ ಇಂದು ರಿಲೀಸ್ ಆಗಿದೆ.

Advertisement

ಚಿತ್ರಕ್ಕೆ ‘ಮಾರ್ಟಿನ್’ ಎನ್ನುವ ಹೆಸರು ಇಡಲಾಗಿದ್ದು, ಚಿತ್ರದ ಲುಕ್ ಭರ್ಜರಿಯಾಗಿ ಮೂಡಿ ಬಂದಿದೆ.     ಕೈಗೆ ಬೇಡಿ ಹಾಕಿದ್ದರೂ, ಸಿಗರೇಟು ಸೇದುತ್ತಾ ಖಡಕ್ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಅವರ ಖಡಕ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಫಸ್ಟ್ ಲುಕ್ ನೋಡುತ್ತಿದ್ದರೆ ಇದೊಂದು ಮಾಸ್ ಸಿನಿಮಾ ಅನ್ನೋದು ಪಕ್ಕಾ ಆಗಿದೆ. ಮಾರ್ಟಿನ್ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಎಪಿ ಅರ್ಜುನ್ ಅವರು ಧ್ರುವ ಸರ್ಜಾರ ಚೊಚ್ಚಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿದ್ದು ಸಿನಿ ರಸಿಕರಿಗೆ ಭರ್ಜರಿ ರಸದೌತನ ನೀಡುವ ನಿರೀಕ್ಷೆ ಮೂಡಿಸಿದೆ.

Advertisement

ಮಾರ್ಟಿನ್ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಆರಂಭದಲ್ಲೇ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ಚಿತ್ರದ ಹೊ ವೋಲ್ಟೇಜ್ ಆಕ್ಷನ್ ದೃಶ್ಯವನ್ನು ದಕ್ಷಿಣ ಭಾರತದ ಖ್ಯಾತ ಸಾಹಸ ಕಲಾವಿದರಾದ ರಾಮ್-ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next