Advertisement

ವಿವಿಧ ಕಡೆಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

12:42 PM Nov 01, 2020 | Suhan S |

ಪುತ್ತೂರು, ಅ. 31: ಬುಡಕಟ್ಟು ಜನಾಂಗ ದಲ್ಲಿಯೂ ಪ್ರತಿಭಾವಂತರಿದ್ದಾರೆ. ಅಂತಹ ಪ್ರತಿಭೆಗಳನ್ನು ಸಮಾಜ ಗುರುತಿಸಿ, ಗೌರವಿಸ ಬೇಕು. ಆ ಸಮಾಜಕ್ಕೂ ಗೌರವ ಕೊಡುವ ಮುಖಾಂತರ ಸಮಾಜದ ಪ್ರತಿಯೊಬ್ಬ ನಾಗರಿ ಕರನ್ನೂ  ಸಮಾನವಾಗಿ ಕಾಣಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಪುತ್ತೂರು ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಯನ್ನು ಉದ್ಘಾಟಿಸಿ, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ತಹಶೀಲ್ದಾರ್‌ ರಮೇಶ್‌ ಬಾಬು, ತಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹರೀಶ್‌ ಬಿಜತ್ರೆ, ಮೀನಾಕ್ಷಿ ಮಂಜುನಾಥ ಅತಿಥಿಗಳಾಗಿದ್ದರು.

ನಗರಸಭಾ ಸದಸ್ಯ ಮನೋಹರ್‌ ಕಲ್ಲಾರೆ, ಉಪತಹಶೀಲ್ದಾರ್‌ ರಾಮಣ್ಣ ನಾಯ್ಕ, ತಾಲೂಕು ಕಚೇರಿಯ ನಾಗೇಶ್‌, ದಯಾನಂದ, ಸಮಾಜ ಕಲ್ಯಾಣ ಇಲಾಖೆಯ ಸಿಬಂದಿ ಚನಿಯಪ್ಪ ನಾಯ್ಕ, ಅನ್ನಪೂರ್ಣ ಮುಂತಾದವರು ಭಾಗವಹಿಸಿದ್ದರು. ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕ ಕೃಷ್ಣ ಬಿ. ಸ್ವಾಗತಿಸಿ, ಪ್ರೇಮಲತಾ ವಂದಿಸಿದರು.

ಸುಳ್ಯ, ಅ. 31: ಸುಳ್ಯ ತಾಲೂಕು ನಾಡಹಬ್ಬಗಳ ದಿನಾಚರಣೆ ಸಮಿತಿಯ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯು ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆಯಿತು.

Advertisement

ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ  ಕಾರ್ಯಕ್ರಮವನ್ನು ಉದ್ಘಾಟಿಸಿ ವಾಲ್ಮೀಕಿ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಚಿದಾನಂದ ಯು.ಎಸ್‌. ಉಪನ್ಯಾಸ ನೀಡಿದರು. ತಾ.ಪಂ. ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ತಹಶೀಲ್ದಾರ್‌ ಅನಂತಶಂಕರ್‌, ಉಪ  ತಹಶೀಲ್ದಾರ್‌ ಚಂದ್ರಕಾಂತ್‌ ಎಂ.ಆರ್‌., ಬಿ.ಸಿ.ಎಂ. ವಿಸ್ತರಣಾಧಿಕಾರಿ ವಿಜಯ್‌, ತಾ.ಪಂ.ನ ರಾಜಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಚಂದ್ರಶೇಖರ ಉಪಸ್ಥಿತರಿದ್ದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next