Advertisement
ಪ್ರಸ್ತುತ ಮಂಗಳನ ಮೇಲ್ಮೈನಲ್ಲಿ ಕ್ಯೂರಿಯಾಸಿಟಿ ಮತ್ತು ಪರ್ಸೆವೆರನ್ಸ್ ರೋವರ್‌ಗಳು ಮಾತ್ರವೇ ಚಲಿಸುತ್ತಿವೆ. ಆದರೆ, ಪ್ರಸ್ತುತ ಪತ್ತೆಯಾಗಿರುವ ಗುರುತುಗಳು ಈ ನೌಕೆಗಳಿಂದ ಆಗಿದ್ದಲ್ಲ. ಶಿಲಾಖಂಡಗಳ ಉರುಳುವಿಕೆಯಿಂದ ಅಂದಾಜು 900 ಕಿ.ಮೀ. ಉದ್ದದ ಟ್ರ್ಯಾಕ್ ರಚನೆಯ ಗುರುತುಗಳು ಸೃಷ್ಟಿಯಾಗಿವೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ನಾಸಾ ಹಾರಿಬಿಟ್ಟಿರುವ ಮಾರ್ಸ್ ರಿಕೊನೈಸನ್ಸ್ ಆರ್ಬಿಟರ್ ಉಪಗ್ರಹದಲ್ಲಿ ಅಳವಡಿಸಲಾದ ಹೈ-ರೆಸಲ್ಯೂಷನ್ ಇಮೇಜಿಂಗ್ ಸೈನ್ಸ್ ಎಕ್ಸ್‌ಪಿರಿಮೆಂಟ್ (ಎಚ್‌ಐಆರ್‌ಐಎಸ್‌ಇ) ಕ್ಯಾಮೆರಾವು 2006ದಿಂದ 2020ರ ವರೆಗೆ ಮಂಗಳನಲ್ಲಿ ಮೂಡಿರುವ ಈ ಗುರುತುಗಳನ್ನು ಪತ್ತೆಹಚ್ಚಿದೆ. ಅಹ್ಮದಾಬಾದ್‌ನಲ್ಲಿನ ಭೌತ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳ ತಂಡ ಇದನ್ನು ಶೋಧಿಸಿದೆ. 4500ಕ್ಕೂ ಅಧಿಕ ಗುರುತುಗಳು
ಮಂಗಳನಲ್ಲಿ ಭೂಕಂಪನ ಚಟುವಟಿಕೆಗಳು ಅಧಿಕವಿರುವ “ಸೆರ್ಬೆರಸ್ ಫೊಸಾಯಿ’ ವಲಯದಲ್ಲಿ ಇಂಥ 4500ಕ್ಕೂ ಅಧಿಕ ಗುರುತುಗಳು ಪತ್ತೆಯಾಗಿವೆ. “ಮಂಗಳ ಈಗಲೂ ಜೀವಂತವಾಗಿದೆ. ಭೂಕಂಪನದ ಪಲ್ಲಟಗಳಿಂದ ಶಿಲಾಖಂಡಗಳು ಉರುಳಿ ಮೂಡಿರುವಂಥ ಈ ರಚನೆಗಳು 4 ಮಂಗಳವರ್ಷಗಳಲ್ಲಿ (ಭೂಮಿಯ 8 ವರ್ಷಗಳು) ಅಳಿಸಿಹೋಗುವ ಸಾಧ್ಯತೆ ಇದೆ ಎಂದು ಲ್ಯಾಬ್‌ನ ಸಂಶೋಧನ ತಂಡದ ಮಖ್ಯಸ್ಥ ಡಾ. ಎಸ್. ವಿಜಯನ್ ಅಂದಾಜಿಸಿದ್ದಾರೆ. ಸಂಶೋಧನೆಯ ವರದಿಯನ್ನು “ಜಿಯೋಫಿಸಿಕಲ್ ರೀಸರ್ಚ್ ಲೆಟರ್ಸ್’ ಪ್ರಕಟಿಸಿದೆ.