ನೆಲಮಂಗಲ: ಅಗ್ನಿವಂಶಕ್ಷತ್ರಿಯ (ತಿಗಳ) ಸಮುದಾ ಯ ವ್ಯಕ್ತಿಯೊಬ್ಬ ಅನ್ಯ ಸಮುದಾಯದ ಯುವತಿ ಯನ್ನು ಮದುವೆಯಾಗಿದ್ದಕ್ಕೆ, ತಿಗಳ ಸಮುದಾಯದ ಯಜಮಾನರುಗಳು ಬಹಿಷ್ಕಾರ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ದೂರು ಕೊಟ್ಟ ಹಿನ್ನೆಲೆಯಲ್ಲಿ, ತಿಗಳ ಯಜಮಾನರುಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಗ್ರಾಮಕ್ಕೆ ಸೇರಿಸುವುದಿಲ್ಲ ಎಂದು ಹೈಡ್ರಾಮ ನಡೆಸಿದರು.
ತಾಲೂಕಿನ ಮರಳಕುಂಟೆ ಗ್ರಾಮದ ತಿಗಳ ಸಮುದಾಯ ವ್ಯಕ್ತಿ ಮಧುಸೂಧನ್ ವೃತ್ತಿಯಲ್ಲಿ ವಕೀಲನಾಗಿದ್ದು, ಈತ ಕಳೆದ ಒಂದೂವರೆ ವರ್ಷದ ಹಿಂದೆ ವಿಶ್ವಕರ್ಮ ಜನಾಂಗದ ಯುವತಿಯನ್ನು ಮದುವೆಯಾಗಿದ್ದ, ಈಕೆ ಸಾಫ್ಟ್‌ವೇರ್ ಇಂಜಿನಿಯರ್‌ಯಾಗಿದ್ದು, ಗಂಡ ಹೆಂಡತಿ ನೆಮ್ಮದಿಯಾಗಿ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಮದುವೆಯಾದ ದಿನದಿಂದಲೂ ತಿಗಳ ಸಮು ದಾಯದ ಮುಖಂಡರುಗಳು, ತುಮಕೂರು-ಬೆಂಗಳೂರು ಸೇರಿದಂತೆ ಹಲವಾರು ಯಜಮಾನರುಗಳು ಇವರನ್ನು ಯಾವುದೇ ತಿಗಳ ಸಮುದಾಯದ ಮನೆಗೆ ಸೇರಿಸ ಬಾರದು, ಮದುವೆ ಶುಭ ಸಮಾರಂಭಗಳಿಗೆ ಬರುವಂತಿಲ್ಲ ಇವರ ಮನೆಯಲ್ಲಿ ಯಾರಾದರೂ ಸತ್ತರೆ ಯಾರು ಸಹ ಹೋಗುವಂತಿಲ್ಲ ಎಂದು ಮನಸ್ಸಿಗೆ ಬಂದ ಹಾಗೆ ಮಧುಸೂದನ್ ಕುಟುಂಬಕ್ಕೆ ತೊಂದರೆ ಕೊಡಲು ಪ್ರಾರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಕೀಲ ವೃತ್ತಿಯಲ್ಲಿದ್ದ ಮಧುಸೂಧನ್ ದಾಬಸ್‌ಪೇಟೆ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾನೆ. ನಂತರ ಪೊಲೀಸರು ತಿಗಳ ಸಮುದಾಯದ ಮುಖಂಡರನ್ನು ಠಾಣೆಗೆ ಕರೆಸಿದಾಗ ಸುಮಾರು 500ಕ್ಕೂ ಹೆಚ್ಚು ಜನರು ಜಮಾಯಿಸಿ ಹೈಡ್ರಾಮ ನಡೆಸಿದ್ದಾರೆ.
ವಕೀಲ ಮಧುಸೂಧನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಮ್ಮ ಸಮುದಾಯದ ಮೂಢಚಾರ ಹಾಗೂ ಕಟ್ಟುನಿಟ್ಟನ್ನು ಧಿಕ್ಕರಿಸಿ ನಮಗೆ ಸಮುದಾಯ ಸಮಾಜದಲ್ಲಿ ನ್ಯಾಯಯುತವಾಗಿ ಬದುಕಲು ಬಿಟ್ಟರೆ ಸಾಕು. ಬಹಿಷ್ಕಾರ ಪದ್ಧತಿ ಇಂದಿಗೂ ಜೀವಂತ ಇರು ವುದು ಎಷ್ಟು ಸರಿ, ಸಮುದಾಯದ ಯಜಮಾನರು ಎನಿಸಿಕೊಂಡಿ ರುವ ದೊಡ್ಡ ಮನುಷ್ಯರು ಹೀಗೆ ನಡೆದು ಕೊಳ್ಳುವುದು ಎಷ್ಟು ಸರಿ, ಅವರಲ್ಲೇ ನೂರಾರು ಲೋಪದೋಷಗಳಿದ್ದರೂ, ಸಹ ನಮ್ಮಂತವರ ಕುಟುಂಬಗಳಿಗೆ ಬಹಿಷ್ಕಾರ ಹಾಕಲು ಮುಂದಾಗುತ್ತಾರೆ, ಸದ್ಯ ನಾವು ಸಹ ಸಮುದಾಯದಿಂದ ಬೆಂದು ನೊಂದು ಪೊಲೀಸ್ ಠಾಣೆಗೆ ಬಂದಿದ್ದೇವೆ, ಇಲ್ಲಿನ ಸರ್ಕಲ್ ಇನ್‌ಸ್ಪೆಕ್ಟರ್ ಸಹ ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ, ಇಂತಹ ಯುಗದಲ್ಲೂ ಸಹ ಮೂಢನಂಬಿಕೆಗಳು ಇರುವುದು ಎಷ್ಟು ಸರಿ ಎಂದರು.
ಪ್ರತಿಕ್ರಿಯೆ ನೀಡಲು ನಕಾರ : ಮಧುಸೂಧನ್ ಎಂಬಾತ ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿದ್ದಾನೆ. ಸಮುದಾಯದ ಬಹಿಷ್ಕಾರ ವಿಷಯವಾಗಿ ಮಾಧ್ಯಮಗಳಿಗೆ ತುಮಕೂರು, ಕ್ಯಾತ್ಸಂದ್ರದ ಸಮುದಾಯದ ಯಜಮಾನರುಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿ ಸಮುದಾಯದ ಕಟ್ಟುನಿಟ್ಟು ನಮಗೆ ಸೇರಿದ್ದು ಎಂದು ಅಲ್ಲಿಂದ ಕಾಲ್ಕಿತ್ತರು.