Advertisement
ಶ್ರೀ ಭಗವತಿಯ ನಡೆಯಲ್ಲಿ ಕಾಂಞಂಗಾಡ್‌ನ ಪುದಿಯ ಕೋಟೆ (ಹೊಸದುರ್ಗ)ಯ ಬಾಲಚಂದ್ರನ್-ಜಯಂತಿಯ ಪುತ್ರ ವಿಷ್ಣು ಪ್ರಸಾದ್ ಮೇಲ್ಪರಂಬದ ಶಮೀಂ ಮಂಜಿಲ್‌ನ ರಾಜೇಶ್ವರಿಯ ಕುತ್ತಿಗೆಗೆ ತಾಳಿ ಕಟ್ಟಿದಾಗ ಅಬ್ದುಲ್ಲ-ಖದೀಜಾ ದಂಪತಿ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. ಈ ಸಂದರ್ಭ ವಧುವಿನ ಇತರ ಮುಸ್ಲಿಂ ಸಹೋದರರೂ ಉಪಸ್ಥಿತರಿದ್ದರು.
ಅಬ್ದುಲ್ಲ-ಖದೀಜಾ ದಂಪತಿಯ ಸಾಕು ಪುತ್ರಿ ತಂಜಾವೂರು ನಿವಾಸಿ ಯಾದ ರಾಜೇಶ್ವರಿ 7-8 ವರ್ಷ ಪ್ರಾಯವಿದ್ದಾಗ ಇಲ್ಲಿಗೆ ಬಂದಿದ್ದಳು. ಆಕೆಗೆ 10 ವರ್ಷವಾದಾಗ ತಂದೆ- ತಾಯಿ ನಿಧನ ಹೊಂದಿದ್ದರು. ತಂದೆ ಶರವಣನ್ ಕಾಸರಗೋಡಿನಲ್ಲೂ, ಮೇಲ್ಪರಂಬದಲ್ಲೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸಿದ್ದರು. ಹಲವು ವರ್ಷ ಅಬ್ದುಲ್ಲ ಅವರ ಕಾಂಞಂಗಾಡ್‌ನ ಕುನ್ನರಿಯದಲ್ಲಿರುವ ಕೃಷಿ ಭೂಮಿ ಯಲ್ಲಿ ಕೆಲಸ ಮಾಡಿದ್ದರು. ಹೀಗೆ ಅಬ್ದುಲ್ಲ ಅವರ ಮನೆಯನ್ನು ಸೇರಿ ಕೊಂಡ ರಾಜೇಶ್ವರಿ ಅಬ್ದುಲ್ಲ ಅವರ ಮಕ್ಕಳಾದ ಶಮೀಮ್, ನಜೀಬ್, ಶರೀಫ್ ಅವರ ಸಹೋದರಿಯಾಗಿ ಬೆಳೆದಳು. ಇತ್ತೀಚೆಗೆ ಅದೇ ಊರಿನ ವಿಷ್ಣು ಪ್ರಸಾದ್ ಅವರ ಹೆತ್ತವರು ತಮ್ಮ ಪುತ್ರನಿಗೆ ರಾಜೇಶ್ವರಿಯನ್ನು ವಿವಾಹ ಮಾಡಿ ಕೊಡುವಂತೆ ಪ್ರಸ್ತಾವ ಮಾಡಿದ್ದರು. ವಿವಾಹವನ್ನು ಹಿಂದೂ ಕ್ಷೇತ್ರದಲ್ಲಿ ನೆರವೇರಿಸಿ ಕೊಡಬೇಕೆಂದು ಕೇಳಿ ಕೊಂಡಿದ್ದರಿಂದ ಎಲ್ಲ ಧರ್ಮದವರೂ ಪ್ರವೇಶಿಸಬಹುದಾದ ಕಾಂಞಂಗಾಡ್‌ಮನ್ಯೋಟ್ಟು ಕ್ಷೇತ್ರ ದಲ್ಲಿ ವಿವಾಹ ಮಾಡಲು ತೀರ್ಮಾನಿಸಲಾಯಿತು.
Related Articles
Advertisement
ವಿವಾಹ ಸಮಾರಂಭ ನಡೆಯು ತ್ತಿದ್ದಾಗ ದೂರ ಉಳಿದಿದ್ದ ಅಬ್ದುಲ್ಲ, ಸಹೋದರ ಮುತ್ತಲಿಬ್, ಪತ್ನಿಯ ಸಹೋದರ ಬಶೀರ್ ಕುನ್ನರಿಯತ್ ಅವರನ್ನು ವರನ ಮನೆಯವರು ಕೈಹಿಡಿದು ಮಂಟಪದ ಕಡೆ ಕರೆತಂದರು.