Advertisement
ಉತ್ತರಹಳ್ಳಿಯ ಚಂದ್ರಶೇಖರ್ಕೆ.ಎಸ್. ಕುಟುಂಬ ಬಹಳ ಹಿಂದಿನಿಂದಲೂ, ನವರಾತ್ರಿ ಗೊಂಬೆ ಪೂಜೆ ನಡೆಸುತ್ತಾ ಬಂದಿದೆ. ಅವರ ತಂದೆಯ ಕಾಲದಿಂದಲೂ ಆಚರಣೆಯಲ್ಲಿರುವ ಗೊಂಬೆ ಪೂಜೆ, ವರ್ಷದಿಂದ ವರ್ಷಕ್ಕೆ ಕಳೆಗಟ್ಟುತ್ತಿದೆ. ಒಂದು ದೊಡ್ಡ ಕೋಣೆಯನ್ನು ಗೊಂಬೆಗಳಿಗೇ ಬಿಟ್ಟುಕೊಡಲಾಗಿ ದ್ದು, ಹತ್ತು ದಿನಗಳ ಕಾಲ ಅಲ್ಲಿ ಗೊಂಬೆಗಳದ್ದೇ ದರ್ಬಾರ್! ಈ ಮನೆಯಲ್ಲಿ ಎಲ್ಲರಿಗೂ ಗೊಂಬೆಗಳ ಮೇಲೆ ಅದೇನೋ ಪ್ರೀತಿ. ಮಾಲ್‌ಗೇ ಹೋಗಲಿ, ಟೂರ್‌ಗೆà ಹೋಗಲಿ, ಎಲ್ಲಾದರೂ ಚಂದದ ಗೊಂಬೆಯನ್ನು ಕಂಡರೆ ಮನೆಗೆ ತರದೇ ಬಿಡುವುದಿಲ್ಲ. ಇವರ ಗೊಂಬೆ ಸಂಗ್ರಹಾಲಯದಲ್ಲಿ 3 ಸಾವಿರ ಗೊಂಬೆಗಳಿವೆ!
ಮೊದಲೆಲ್ಲಾ ಎಲ್ಲರ ಮನೆಗಳಂತೆ ಇವರೂ ಬರೀ ಪಟ್ಟದ ಗೊಂಬೆಗಳನ್ನಿಟ್ಟು ಪೂಜಿಸುತ್ತಿದ್ದರು. ಆದರೆ, ಕಳೆದ ಹತ್ತು ವರ್ಷಗಳಿಂದ, ಪ್ರತಿ ವರ್ಷವೂ ಒಂದು ಹೊಸ ಥೀಂ ಇಟ್ಟುಕೊಂಡು, ಆ ಪ್ರಕಾರ ಗೊಂಬೆ ಪೂಜೆ- ಪ್ರದರ್ಶನ ಮಾಡುತ್ತಾರೆ. ವೆಂಕಟೇಶ ಕಲ್ಯಾಣ, ತಿರುಪತಿ ದೇವಸ್ಥಾನ, ಶೃಂಗೇರಿ ಶಾರದಾಂಬ, ಕೊಲ್ಲೂರು ಮೂಕಾಂಬಿಕೆ, ಕಮಲಶಿಲೆಯ ಬ್ರಾಹ್ಮಿ ದುರ್ಗಾ ಪರಮೇಶ್ವರಿ… ಹೀಗೆ ವಿವಿಧ ಪರಿಕಲ್ಪನೆಯಲ್ಲಿ ಗೊಂಬೆಗಳನ್ನು ಜೋಡಿಸಿ, ಪೂಜೆ ಮಾಡಿದ್ದಾರೆ.
Related Articles
ಈ ಬಾರಿ ಗಂಡು- ಹೆಣ್ಣು ಪಟ್ಟದ ಗೊಂಬೆಯ ಮದುವೆ ನಡೆಯುತ್ತಿದೆ. ಕಲ್ಯಾಣ ಮಂಟಪ ಅಲಂಕಾರ, ವಾಲಗ, ಗೌರಿ ಪೂಜೆ, ವರಪೂಜೆ, ಮದರಂಗಿ ಶಾಸ್ತ್ರ, ಕಾಶೀಯಾತ್ರೆ, ಕನ್ಯಾದಾನ, ಮೆರವಣಿಗೆ… ಹೀಗೆ ಎಲ್ಲ ಸಂಪ್ರದಾಯಗಳನ್ನೂ ಬಿಂಬಿಸುವ ಗೊಂಬೆಗಳನ್ನು ಕ್ರಮಬದಟಛಿವಾಗಿ ಜೋಡಿಸಲಾಗಿದೆ.
Advertisement
ಹಬ್ಬ ಮುಗಿದ ನಂತರ…ದಸರಾ ಸಂಭ್ರಮ ಮುಗಿದ ಮೇಲೆ, ಎಲ್ಲ ಗೊಂಬೆಗಳನ್ನು ಜೋಪಾನವಾಗಿ ಎತ್ತಿ ಇಡಬೇಕು. ಪ್ರತಿಯೊಂದು ಗೊಂಬೆಗಳನ್ನೂ ಒರೆಸಿ, ಹತ್ತಿ ಅಥವಾ ಬಟ್ಟೆಯಲ್ಲಿ ಸುತ್ತಿ, ಪ್ರತ್ಯೇಕ ಬಾಕ್ಸ್‌ಗಳಲ್ಲಿ ಇಡಲಾಗುತ್ತದೆ. ಪ್ರತಿ ಬಾಕ್ಸ್‌ನ ಮೇಲೂ, ಒಳಗಿರುವ ಗೊಂಬೆಯ ಹೆಸರು ಬರೆಯುತ್ತಾರೆ. ಕೂಡು ಕುಟುಂಬ
ಚಂದ್ರಶೇಖರ್ ಅವರದ್ದು ಕೂಡು ಕುಟುಂಬ. ಅವರು ಹಾಗೂ ಪತ್ನಿ ಇಂದು, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರೆ, ತಮ್ಮ ಸತೀಶ್ ಹಾಗೂ ಹೆಂಡತಿ ಸವಿತಾ ಸತೀಶ್, ಸಾಫ್ಟ್ವೇರ್ ಎಂಜಿನಿಯರ್‌ಗಳು. ಕೆಲಸದೊತ್ತಡ, ಟೈಮ್ ಇಲ್ಲ ಅಂತೆಲ್ಲಾ ಯಾವತ್ತೂ ಸಂಪ್ರದಾಯವನ್ನು ಮರೆಯದ ಇವರು, ದಸರಾಕ್ಕೂ ಮೊದಲಿನ ಒಂದು ತಿಂಗಳು, ಪ್ರತಿ ರಾತ್ರಿ ಹನ್ನೆರಡವರೆಗೆ ಒಟ್ಟಾಗಿ ಸೇರಿ ಪೂಜೆಗೆ ಸಿದಟಛಿತೆ ಮಾಡಿಕೊಳ್ಳುತ್ತಾರೆ. ಪ್ರತಿ ಬಾರಿಯ ಪ್ರದರ್ಶನಕ್ಕೆ 30-35 ಸಾವಿರ ಖರ್ಚು ಮಾಡುತ್ತಾರೆ. ಹತ್ತು ದಿನವೂ ಪೂಜೆ
ಮೊದಲ ದಿನ ಕಲಶವನ್ನಿಟ್ಟು ಪೂಜೆ ಪ್ರಾರಂಭಿಸಿದರೆ, ಮುಂದಿನ ಹತ್ತು ದಿನವೂ ಗೊಂಬೆಗಳ ಪೂಜೆ ನಡೆಯುತ್ತದೆ. ಕೊನೆಯ ದಿನ ಪಟ್ಟದ ಗೊಂಬೆಗಳಿಗೆ ಆರತಿ ಮಾಡಿ, ಕಲಶವನ್ನು ತೆಗೆದು, ಗೊಂಬೆಗಳನ್ನು ಮಲಗಿಸಿಬಿಟ್ಟರೆ ಪೂಜೆ ಮುಗಿದಂತೆ.ಗೊಂಬೆಗಳನ್ನು ನೋಡಲು ಬರುವ ಸ್ನೇಹಿತರಿಗೆ ಬನ್ನಿ, ತಾಂಬೂಲ ನೀಡುವ ಸಂಪ್ರದಾಯವೂ ಇದೆ. ಪುಟಾಣಿ ಗೊಂಬೆಮನೆ
ಮನೆಯ ಕಿರಿಯ ಸದಸ್ಯೆ, 6ನೇ ತರಗತಿಯ ಧೃತಿ ಕೂಡ ಗೊಂಬೆಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾಳೆ. ಅಷ್ಟೇ ಅಲ್ಲದೆ, ಆಕೆಗೆಂದೇ ಒಂದಷ್ಟು ಗೊಂಬೆ ಹಾಗೂ ಪ್ರತ್ಯೇಕ ಜಾಗವನ್ನು ಬಿಟ್ಟು ಕೊಡಲಾಗಿದ್ದು, ತನ್ನ ಕ್ರಿಯೇಟಿವಿಟಿಗೆ ತಕ್ಕಂತೆ ಪುಟಾಣಿ ಗೊಂಬೆಗಳ ಶಾಲೆಯನ್ನು ರೂಪಿಸಿದ್ದಾಳೆ. ಗೊಂಬೆಮನೆ? ನಂ.992, ಸ್ಕಂದ, 29ನೇ ಮೇನ್, ಪೂರ್ಣಪ್ರಜ್ಞ ಲೇಔಟ್, ಉತ್ತರಹಳ್ಳಿ ಪ್ರಿಯಾಂಕ