ಬೆಂಗಳೂರು: ವಿವಾಹ ನೋಂದಣಿ ವ್ಯವಸ್ಥೆ, ಗ್ರಾಮೀಣಭಾಗದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಫಲಾನುಭವಿಗಳ ಆಯ್ಕೆ ಹಾಗೂ ಜನನ ಮತ್ತುಮರಣ ದೃಢೀಕರಣಪತ್ರ ಇನ್ನು ಮುಂದೆಗ್ರಾಮ ಪಂಚಾಯಿತಿಮಟ್ಟದಲ್ಲಿ ಜಾರಿಗೆಬರಲಿದೆ!
ಇಂತಹದ್ದೊಂದುಪ್ರಸ್ತಾವನೆ ಗ್ರಾಮೀಣಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಮಟ್ಟದಲ್ಲಿ ಸಿದ್ಧಗೊಳ್ಳುತ್ತಿದ್ದು, ಅದಕ್ಕೆ ಅಂತಿಮ ರೂಪಸಿಕ್ಕರೆ ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ.ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದಸಭೆಯಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು,ಇದರಲ್ಲಿ ಅಂತರ ಇಲಾಖಾ ವಿಷಯಗಳು ಸೇರಿಕೊಂಡಿರುವುದರಿಂದ ಸಂಬಂಧಪಟ್ಟ ಇಲಾಖೆಗಳ Óಮ್ಮತಿಪಡೆದುಕೊಳ್ಳಬೇಕಾಗಿದೆ ಎಂದು ಹೇಳಲಾಗಿದೆ.
ಈಗಿರುವ ವ್ಯವಸ್ಥೆಯಲ್ಲಿ ವಿವಾಹ ನೋಂದಣಿ ಪ್ರಕ್ರಿಯೆತಾಲೂಕು ಮಟ್ಟದಲ್ಲಿ ಉಪ ನೋಂದಣಾಧಿಕಾರಿಗಳಕಚೇರಿಯಲ್ಲಿ ನಡೆಯುತ್ತಿದೆ. ಹೆಚ್ಚಿನವರು ನೋಂದಣಿಯನ್ನೇ ಮಾಡಿಸುವುದಿಲ್ಲ. ಸುಲಭವಾಗಿ ಗ್ರಾಪಂಗಳಮಟ್ಟದಲ್ಲೇ ವಿವಾಹ ನೋಂದಣಿಗೆ ಅವಕಾಶ ಮಾಡಿಕೊಟ್ಟರೆ ಅನುಕೂಲ.ಈಹಿನ್ನೆಲೆಯಲ್ಲಿ ಈಗಿರುವ ಉಪನೋಂದಣಾಧಿಕಾರಿಗಳ ಜೊತೆಗೆ ಪಂಚಾಯತ್‌ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ವಿವಾಹನೋಂದಣಿ ಪ್ರಾಧಿಕಾರಿಗಳನ್ನಾಗಿ ಘೋಷಿಸಲು ಪ್ರಸ್ತಾಪಿಸಲಾಗಿದೆ.
ಇದರಿಂದ ಗ್ರಾಮೀಣಭಾಗದಲ್ಲಿಬಾಲ್ಯ ವಿವಾಹಗಳನ್ನು ತಡೆಗಟ್ಟಲೂ ಸಾಧ್ಯವಾಗುತ್ತದೆಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಗ್ರಾಪಂಗಳಲ್ಲಿ ಪಿಂಚಣಿ ಯೋಜನೆ: ಪ್ರಸ್ತುತಗ್ರಾಪಂಗಳಲ್ಲಿ ಬಾಪೂಜಿ ಸೇವಾಕೇಂದ್ರಗಳ ಮೂಲಕಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆಸೇರಿದ 60 ಸೇವೆಗಳನ್ನು ನೀಡಲಾಗುತ್ತಿದೆ. ಅದರಂತೆ,ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನುಕಂದಾಯ ಇಲಾಖೆ ಮೂಲಕ ಒದಗಿಸಲಾಗುತ್ತಿದೆ.ಆದರೆ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆಗ್ರಾಪಂಗಳು ನಡೆಸುವ ಗ್ರಾಮಸಭೆಗಳಲ್ಲಿ ಹೆಚ್ಚಿನಬೇಡಿಕೆ ಬರುತ್ತಿದೆ. ಆದ್ದರಿಂದ ಈ ಯೋಜನೆಗಳ ಅರ್ಹಫಲಾನುಭವಿಗಳು ಗ್ರಾಮ ಪಂಚಾಯಿತಿಗೆ ಅರ್ಜಿಸಲ್ಲಿಸಿದರೆ ಅವುಗಳನ್ನು ಯೋಜನೆಗಳ ಮಾನದಂಡಗಳೊಂದಿಗೆ ಪರಿಶೀಲಿಸಿ ಆನ್‌ಲೈನ್ ಮೂಲಕತಹಶೀಲ್ದಾರರಿಗೆ ಶಿಫಾರಸು ಕಳುಹಿಸಲು ಅವಕಾಶಮಾಡಿಕೊಡಬೇಕು.
ರಫೀಕ್ ಅಹ್ಮದ್