Advertisement
ಮಹಾನಗರ ಪಾಲಿಕೆಯ ಮಾಜಿ ಸದಸ್ಯ, ಉದ್ಯಮಿ ರಂಗನಾಥ ಕಿಣಿ ತಮ್ಮ ಪುತ್ರ ರಜತಾದಿತ್ಯ ಮತ್ತು ಮಧುಶ್ರೀ ಅವರ ಮದುವೆಯ ಕರೆಯೋಲೆ ಇ- ಕಾರ್ಡ್ ಮತ್ತು ವಾಟ್ಸಪ್ ಚಾಟಿಂಗ್ ಶೈಲಿಯಲ್ಲಿ ರೂಪಿಸಿ ಎಲ್ಲರಿಗೂ ತಲುಪಿಸಿದ್ದಾರೆ.
ಕೆಲವು ವರ್ಷಗಳ ಹಿಂದಿನಿಂದಲೇ ಚಾಲ್ತಿಯಲ್ಲಿರುವ ಇ-ಕಾರ್ಡ್, ಮಂಗಳೂರಿಗೆ ತುಸು ಹೊಸದು. ಸದ್ಯ ಎರಡು ರೀತಿಯ ಇ-ಕಾರ್ಡ್‌ಗಳು ಪರಿಚಿತಗೊಂಡಿವೆ. ನವ ವಧೂ-ವರರ ಪ್ರಿವೆಡ್ ಫೋಟೋಗಳನ್ನು ಜತೆಗೂಡಿಸಿ, ಮದುವೆಯ ದಿನ, ಸ್ಥಳ, ಮುಹೂರ್ತ, ಕುಟುಂಬ ಸದಸ್ಯರ ಹೆಸರುಗಳುಳ್ಳ ಸ್ಲೈಡ್ಡ್ ಗಳ ವಿಡಿಯೋ ಮಾಡಲಾಗುತ್ತದೆ. ಇತ್ತೀಚೆಗೆ ವಾಟ್ಸಪ್ ವಿಡಿಯೋ ಚಾಟ್ ಹೋಲುವ ಮಾದರಿಯೂ ಬಂದಿದೆ. ವಿಡಿಯೋ ಸ್ಲೆ„ಡ್‌ಗೆ ಎರಡು ಸಾವಿರ ರೂ. ಖರ್ಚು ತಗಲುತ್ತದೆ. ಆದರೆ, ಚಿತ್ರೀಕರಣ ನಡೆಸಿದ ವಿಡಿಯೋ ಸಂಕಲನಕ್ಕೆ 50 ಸಾವಿರ ರೂ. ಮೀರುವುದಿದೆ. ಲಕ್ಷಗಟ್ಟಲೆ ಖರ್ಚು ಮಾಡ್ತಾರೆ!
ಅದ್ದೂರಿ ಚಿತ್ರೀಕರಣ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇ-ವೆಡ್ಡಿಂಗ್ ಕಾರ್ಡ್‌ಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡುವವರಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ವಿಡಿಯೋ ಆಮಂತ್ರಣ ವೈರಲ್ ಆಗಿತ್ತು. ಇತ್ತೀಚೆಗೆ ಜೆಡಿಎಸ್ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಅವರ ಮಗಳ ಮದುವೆಯ ಆಮಂತ್ರಣ ಪತ್ರಿಕೆಯೂ ಇದೇ ತೆರನಾಗಿತ್ತು.
Related Articles
ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಕಾಗದದ ಆಮಂತ್ರಣದ ಬದಲು ವಿಡಿಯೋ ಮೂಲಕ ಆಹ್ವಾನಿಸಿದರೆ ಹೆಚ್ಚು ಆಕರ್ಷಕ ಎಂಬುದು ಹಲವರ ಅಭಿಪ್ರಾಯ.
Advertisement
ಇ-ಕಾರ್ಡ್ ಮದುವೆ ಕರೆಯೋಲೆ ನಗರಕ್ಕೆ ಹೊಸ ಪರಿಕಲ್ಪನೆ. ಖರ್ಚು ಕಡಿಮೆ. ವಾಟ್ಸಪ್ ಶೈಲಿಯಲ್ಲಿ ಆಮಂತ್ರಣ ಪತ್ರಿಕೆ ಕಳುಹಿಸುವುದೇ ಟ್ರೆಂಡ್ ಎನ್ನುತ್ತಾರೆ ಈ ಉದ್ಯಮದಲ್ಲಿರುವ ಪ್ರವೀಣ್ ಉಡುಪ.
ತಂತ್ರಜ್ಞಾನಕ್ಕೆ ಒಗ್ಗಿದ್ದೇವೆತಂತ್ರಜ್ಞಾನ ಕ್ಷೇತ್ರ ಬೆಳವಣಿಯಾಗುತ್ತಿದ್ದು, ಅದಕ್ಕೆ ಸಮಾಜ ಒಗ್ಗಿಕೊಂಡಿದೆ. ನನ್ನ ಮಗನ ಆಮಂತ್ರಣ ಪತ್ರಿಕೆ ಹೊಸ ರೀತಿಯಲ್ಲಿರಲಿ ಎಂಬ ಕಾರಣದಿಂದ ಇ-ಕಾರ್ಡ್ (ವಿಡಿಯೋ) ಮಾಡಿಸಿದ್ದೇನೆ. ಪರಿಚಿತರೆಲ್ಲರಿಗೂ ವಾಟ್ಸ್ ಆ್ಯಪ್ ಮತ್ತು ಫೇಸ್‌ಬುಕ್ ಮೂಲಕ ಕಳುಹಿಸುತ್ತಿದ್ದೇನೆ. ಉತ್ತಮ ಸ್ಪಂದನೆ ದೊರಕುತ್ತಿದೆ.
– ರಂಗನಾಥ ಕಿಣಿ, ಉದ್ಯಮಿ