Advertisement

ಕ್ರೂರಿ ಕೋವಿಡ್:  ತಾಯಿ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಡುವಂತಾಯಿತು ಪುತ್ರನ ಪರಿಸ್ಥಿತಿ

12:52 PM May 29, 2021 | Team Udayavani |

ತೆಲಂಗಾಣ:  ಹೆತ್ತವರ ಆಶೀರ್ವಾದೊಂದಿಗೆ ಹೊಸ ಜೀವನಕ್ಕೆ ಕಾಲಿಡಬೇಕೆಂದು ವಿದೇಶದಿಂದ ಭಾರತಕ್ಕೆ ಬಂದಿದ್ದ ಮಗ,ತಾಯಿಯ ಶವ ಮುಂದಿಟ್ಟುಕೊಂಡು ಪತ್ನಿಯ ಕೊರಳಿಗೆ ತಾಳಿ ಕಟ್ಟಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

Advertisement

ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್ಪೇಟ್ನಲ್ಲಿ ಇಂತಹದ್ದೊಂದು ಕಣ್ಣೀರು ತರಿಸುವಂತಹ ಪ್ರಸಂಗ ಜರುಗಿದೆ.

ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಎಂಬಾತನಿಗೆ ಮೇ 21ರಂದು ಮದುವೆ ನಿಶ್ಚಯವಾಗಿದೆ. ಮದುವೆಗೆಂದು ಆತ ತನ್ನೂರಿಗೆ ಮರಳಿದ್ದ. ಆದರೆ ಇವರ ತಾಯಿ ಪಾಲ್ಪಾನೂರಿ ರೇಣುಕಾ (49) ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ರೇಣುಕಾ ಅವರ ಸಹೋದರನೂ ಕೂಡ ಕೋವಿಡ್ಗೆ ಬಲಿಯಾಗಿದ್ದರು. ಹೀಗಾಗಿ ರಾಕೇಶ್ ತನ್ನ ವಿವಾಹವನ್ನು ಮುಂದೂಡಿ, ಅಮ್ಮ ಗುಣಮುಖರಾಗಿ ಕ್ಷೇಮವಾಗಿ ಮನೆಗೆ ಬರಲೆಂದು ಕಾಯುತ್ತಿದ್ದ.

ಆದರೆ ತಾಯಿ ಅವರೂ ಕೂಡಾ ಕೋವಿಡ್ನಿಂದ ಸಾವನ್ನಪ್ಪಿದರು. ಬಳಿಕ ಆಯಂಬುಲೆನ್ಸ್ನಲ್ಲಿ ಆಸ್ಪತ್ರೆಯಿಂದ ಗ್ರಾಮಕ್ಕೆ ಮೃತದೇಹವನ್ನು ಕರೆತರಲಾಯಿತು.

ಈ ವೇಳೆ, ಅಮ್ಮನ ಮೃತದೇಹದ ಮುಂದೆಯೇ ಭಾರವಾದ ಮನಸ್ಸು, ದು:ಖದ ಮಡುವಿನಲ್ಲೇ ವರ ರಾಕೇಶ್ ಹಾಗೂ ವಧು ಪರಸ್ಪರ ಹಾರ ಬದಲಾಯಿಸಿಕೊಂಡರು. ಈ ಮೂಲಕ ತೀರಿಹೋದ ಅಮ್ಮನ ಶವದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂಥ ಮನಕಲಕುವ ಘಟನೆಗೆ ಸಾಕ್ಷಿಯಾಗಿ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡವು.

Advertisement
Advertisement

Udayavani is now on Telegram. Click here to join our channel and stay updated with the latest news.

Next