Advertisement
ಜ.4ರಂದು ಆತ ಅಪರಾಧಿ ಎಂದು ಸಾಬೀತಾಗಿತ್ತು. ಜ. 8ರಂದು ನಡೆದ ವಿಚಾರಣೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಜ. 17ರಂದು ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದರು.12 ಮಂದಿಯ ವಿಚಾರಣೆ
ಕುಂದಾಪುರದ ಆಗಿನ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಅವರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಒಟ್ಟು 20 ಸಾಕ್ಷಿಗಳಿದ್ದು, ಸಂತ್ರಸ್ತ ಯುವತಿ ಸಹಿತ 12 ಮಂದಿಯ ವಿಚಾರಣೆ ನಡೆಸಲಾಗಿದೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬಿ. ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ.
ವಂಚನೆ(ಸೆಕ್ಷನ್ 417)ಗೆ 1 ವರ್ಷ ಶಿಕ್ಷೆ ಹಾಗೂ 5 ಸಾ.ರೂ. ದಂಡ,ಅತ್ಯಾಚಾರ (ಸೆಕ್ಷನ್ 376)ಕ್ಕೆ 10 ವರ್ಷ ಕಠಿನ ಸಜೆ ಹಾಗೂ 20 ಸಾ. ರೂ.ದಂಡ ವಿಧಿಸಲಾಗಿದೆ. ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿರು ವುದರಿಂದ ಒಟ್ಟು 10 ವರ್ಷ ಜೈಲು ಹಾಗೂ 25 ಸಾ.ರೂ. ದಂಡ ಪಾವತಿಸಬೇಕು.