Advertisement

ಮದುವೆ ಕಾರಣಕ್ಕೆ ಪತಿ ಪತ್ನಿ ಕೂಡಬೇಕಾಗಿಲ್ಲ

09:00 AM Jul 18, 2018 | Team Udayavani |

ನವದೆಹಲಿ: ಮದುವೆಯಾಗಿರುವ ಕಾರಣಕ್ಕಾಗಿ ಪತಿ ಜತೆ ಪತ್ನಿ ದೈಹಿಕ ಸಂಪರ್ಕ ಹೊಂದಲು ಸಿದ್ಧವಾಗಿರಬೇಕಾಗಿಲ್ಲ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಮತ್ತು ನ್ಯಾ.ಸಿ.ಹರಿಶಂಕರ್‌ ನೇತೃತ್ವದ ಪೀಠ ಮಂಗಳವಾರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮದುವೆ ಎಂಬ ಸಂಬಂಧದಲ್ಲಿ ಪತಿ ಅಥವಾ ಪತ್ನಿಗೆ ದೈಹಿಕ ಸಂಬಂಧ ಬೇಡ ಎನ್ನುವ ಹಕ್ಕಿದೆ. ಸಮಾಗಮಕ್ಕೆ ಪತ್ನಿಯಾದವಳು ಯಾವತ್ತೂ ಸಿದ್ಧವಾಗಿಯೇ ಇರಬೇಕು ಎಂಬ ನಿಯಮವಿಲ್ಲ. ಅದರಲ್ಲಿ ಸಮ್ಮತಿಯೇ ಪ್ರಮುಖವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next