Advertisement

Udupi ಮಹಿಳಾ ನಿಲಯದಲ್ಲಿ ‘ತಾಳಿ ಕಟ್ಟುವ ಶುಭವೇಳೆ’

06:05 PM Dec 20, 2023 | Team Udayavani |

ಉಡುಪಿ: ಮಾದರಿ ವಿವಾಹ ಕಾರ್ಯಕ್ರಮಕ್ಕೆೆ ನಿಟ್ಟೂರಿನಲ್ಲಿರುವ ಮಹಿಳಾ ನಿಲಯ ಸಾಕ್ಷಿಯಾಯಿತು. ನಾನಾ ಕಾರಣದಿಂದ ಮನೆಯವರಿಂದ ದೂರವಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿಟ್ಟೂರು ಮಹಿಳಾ ನಿಲಯದಲ್ಲಿ ಹಲವು ವರ್ಷಗಳಿಂದ ಆಶ್ರಯ ಪಡೆದಿರುವ ಇಬ್ಬರು ಯುವತಿಯರಿಗೆ ಕಂಕಣ ಭಾಗ್ಯ ನೆರೆವೇರಿತು.

Advertisement

ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುಟುಂಬ ಹಿರಿಯರ ಸ್ಥಾನದಲ್ಲಿ ನಿಲ್ಲುವ ಮೂಲಕ ಇಬ್ಬರು ಯುವತಿಯರ ಕೌಟುಂಬಿಕ ಬದುಕಿನ ಭವಿಷ್ಯಕ್ಕೆೆ ನೆರವಾದರು.

ಶೀಲಾ ಅವರ ವಿವಾಹ ಕುಂದಾಪುರ, ಮೊಳಹಳ್ಳಿಯ ಕೃಷಿಕ ವೃತ್ತಿಯಲ್ಲಿರುವ ಗಣೇಶ ಶಾಸ್ತ್ರಿ ಅವರೊಂದಿಗೆ, ಕುಮಾರಿ ಅವರ ವಿವಾಹ ಉತ್ತರಕನ್ನಡ ಜಿಲ್ಲೆೆಯ ಯಲ್ಲಾಪುರ, ಪ್ರಸ್ತುತ ಹೆಬ್ರಿಯಲ್ಲಿ ಅರ್ಚಕರಾಗಿರುವ ಶ್ರೀಧರ್ ಭಟ್ ಅವರೊಂದಿಗೆ ನೆರವೇರಿತು.

ಮಹಿಳಾ ನಿಲಯದ ಸಭಾಂಗಣದಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಯಿತು.

ಜಿಲ್ಲಾಧಿಕಾರಿ ಡಾ ಕೆ. ವಿದ್ಯಾಕುಮಾರಿ ಅವರು ಎರಡು ಜೋಡಿಗಳಿಗೆ ಧಾರೆ ಎರೆಯುವ ಮೂಲಕ ಹೆತ್ತವರ ಸ್ಥಾನ ತುಂಬಿದರು. ವಿವಾಹ ಕಾರ್ಯಕ್ರಮಕ್ಕೆೆ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಗಣ್ಯರು, ಪತ್ರಕರ್ತರು ಸಾಕ್ಷಿಯಾಗಿ ಜೋಡಿಗಳಿಗೆ ಶುಭಹಾರೈಸಿದರು.

Advertisement

ವಿವಾಹ ಭೋಜನಕ್ಕೆೆ ಅನ್ನ, ಸಾರು, ಪಲಾವ್, ಕುರ್ಮ, ಪಲ್ಯ, ಪಾಯಸ, ಲಡ್ಡು, ಮಜ್ಜಿಗೆ, ಜ್ಯೂಸ್, ಐಸ್‌ಕ್ರೀಂ ವ್ಯವಸ್ಥೆೆ ಮಾಡಲಾಗಿತ್ತು. ಸಮಾರಂಭದ ಅನಂತರ ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ ಅವರ ಉಪಸ್ಥಿತಿಯೊಡನೆ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಪ್ರಕ್ರಿಯೆ ನಡೆಯಿತು.

ಜನಪ್ರತಿನಿಧಿ, ಅಧಿಕಾರಿಗಳಿಂದ ಶುಭಹಾರೈಕೆ
ಶಾಸಕ ಯಶ್‌ಪಾಲ್ ಸುವರ್ಣ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ ಅರುಣ್ ಕೆ. ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ, ನಗರಸಭೆ ಸದಸ್ಯೆೆ ಸುಮಿತ್ರಾ ನಾಯಕ್, ಮಹಿಳಾ ನಿಲಯ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಇಲಾಖೆ ಅಧಿಕಾರಿ, ಸಿಬಂದಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next