Advertisement

ಕೋವಿಡ್-19 ಕಳವಳ; ಲಬುಶೇನ್ ಬ್ಯಾಟಿಂಗೂ.. ಬಾಯಿಯ ಫೀಲ್ಡಿಂಗೂ…!

06:10 PM Apr 12, 2020 | keerthan |

ಸಿಡ್ನಿ: ಕೋವಿಡ್-19 ಕಾರಣದಿಂದ ಮನೆಯೊಳಗೆ ಅವಿತು ಕೂರಬೇಕಾದ ಸ್ಥಿತಿಯಲ್ಲಿರುವ ಕ್ರಿಕೆಟಿಗರು ಬಹಳ ಇಕ್ಕಟ್ಟಿನಲ್ಲಿದ್ದಾರೆ. ಅವರಿಗೆಲ್ಲ ಮನೆಯೊಳಗೆ ಇದ್ದು ಅಭ್ಯಾಸವಿಲ್ಲ. ಹೊರಗೆ ಹೋಗಲು ಸಾಧ್ಯವಿಲ್ಲ. ಕನಿಷ್ಠ ಮನೆಯಲ್ಲಿದ್ದು ಅಭ್ಯಾಸ ಮಾಡಲೂ ಬೇಕಾದ ಕನಿಷ್ಠ ಇನ್ನೊಬ್ಬ ಜೊತೆಗಾರಬೇಕು. ಆಧರೆ ಎಲ್ಲರೂ ಅವರ ಮನೆಯಲ್ಲಿದ್ದಾರೆ. ಜೊತೆಗೆ ಎಲ್ಲ ಕ್ರಿಕೆಟಿಗರ ಮನೆಯಲ್ಲಿ ನೆಟ್ ಅಭ್ಯಾಸಕ್ಕೆ ಬೇಕಾದ ವ್ಯವಸ್ಥೆಯೂ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮಾಡುವುದಾದರೂ ಎನು?

Advertisement

ಆಸೀಸ್ ಆಟಗಾರ ಮಾರ್ನಸ್ ಲಬುಶೇನ್ ತಾವೇನು ಮಾಡುತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.

ಸದ್ಯ ಆಸ್ಟ್ರೇಲಿಯಾದಲ್ಲಿ ಲಾಕ್ ಡೌನ್ ಇರುವ ಕಾರಣ ಕ್ವೀನ್ಸ್ ಲ್ಯಾಂಡ್ ನಲ್ಲಿನ ಮನೆಯಲ್ಲಿ ವಾಸವಾಗಿದ್ದಾರೆ. ಅದೃಷ್ಟಶವಾತ್ ಅವರ ಆತ್ಮೀಯ ಗೆಳೆಯರು ಅವರ ಜೊತೆಯಿದ್ದಾರೆ. ಜೊತೆಗೆ ಪ್ರೀತಿಯ ನಾಯಿಯೂ ಸಾಥ್ ನೀಡಿದೆ.

ಲಬುಶೇನ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರೆ ಅವರ ನಾಯಿ ಸಾಥ್ ನೀಡಿದೆ. ಸ್ನೇಹಿತ ಬೌಲಿಂಗ್ ಮಾಡುತ್ತಿದ್ದರೆ, ಲಬುಶೇನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮುದ್ದಿನ ನಾಯಿ ಫೀಲ್ಡಿಂಗ್ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next