ಹೊಬಾರ್ಟ್: ಆ್ಯಶಸ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಹೊಬಾರ್ಟ್ ನಲ್ಲಿ ಇಂದು ಆರಂಭವಾಗಿದೆ. ಆಸ್ಟ್ರೇಲಿಯಾದ ಆಟಗಾರ ಮಾರ್ನಸ್ ಲಬುಶೇನ್ ವಿಚಿತ್ರ ರೀತಿಯಲ್ಲಿ ಔಟಾಗಿದ್ದು, ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ.
44 ರನ್ ಗಳಿಸಿದ್ದ ಲಬುಶೇನ್ ಇಂಗ್ಲೆಂಡ್ ನ ಸ್ಟುವರ್ಟ್ ಬ್ರಾಡ್ ಎಸೆತವನ್ನು ಎಕ್ರಾಸ್ ದಿ ಲೈನ್ ಆಡಲು ಹೋಗಿ ಕ್ಲೀನ್ ಬೌಲ್ಡ್ ಆದರು. ಆಫ್ ಸ್ಟಂಪ್ ಗೆ ಕವರ್ ಆಗಿ ಫ್ಲಿಕ್ ಮಾಡಲು ಹೋದ ಲಬುಶೇನ್ ನಿಯಂತ್ರಣ ತಪ್ಪಿ ದಢಾರನೆ ಬಿದ್ದರು. ಆ ವೇಳೆಗೆ ಚೆಂಡು ವಿಕೆಟ್ ಎಗರಿಸಿ ಆಗಿತ್ತು.
ಇದನ್ನೂ ಓದಿ:ಭಾರತೀಯ ನಾಯಕನಿಂದ ಇದನ್ನು ನಿರೀಕ್ಷೆ ಮಾಡುವುದಿಲ್ಲ: ಕೊಹ್ಲಿ ವಿರುದ್ಧ ಗರಂ ಆದ ಗೌತಿ
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿದೆ. ಆಸೀಸ್ ಮೇಲೆ ಒತ್ತಡ ಹೇರಿದ ಬೌಲರ್ ಗಳು ಆರಂಭದಲ್ಲೇ ಯಶಸ್ಸು ಕಂಡರು. 12 ರನ್ ಆಗುವಷ್ಟರಲ್ಲಿ ಆಸೀಸ್ ನ ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ ಮತ್ತು ಸ್ಟೀವ್ ಸ್ಮಿತ್ ವಿಕೆಟ್ ಒಪ್ಪಿಸಿದ್ದರು. ನಂತರ ಟ್ರಾವಿಸ್ ಹೆಡ್ ಜೊತೆ ಮಾರ್ನಸ್ 71 ರನ್ ಜೊತೆಯಾಟವಾಡಿದರು. ಬಳಿಕ ಮಿಂಚಿದ ಹೆಡ್ 101 ರನ್ ಗಳಿಸಿ ಔಟಾದರೆ, ಗ್ರೀನ್ ಅಜೇಯ 58 ರನ್ ಗಳಿಸಿದ್ದಾರೆ. 52 ಓವರ್ ಅಂತ್ಯಕ್ಕೆ ಆಸೀಸ್ ಐದು ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ.
ಲಬುಶೇನ್ ವಿಚಿತ್ರ ಔಟ್ ಗೆ ಟ್ಟಿಟ್ಟರ್ ಪ್ರತಿಕ್ರಿಯೆ