Advertisement

ಅಭಿವೃದ್ಧಿಗೊಳ್ಳದ ಮರ್ಣೆ-ಪೆರ್ಣಂಕಿಲ ರಸ್ತೆ: ರಸ್ತೆ ಅವ್ಯವಸ್ಥೆಯ ಕುರಿತು ಸ್ಥಳೀಯರ ಅಸಮಾಧಾನ

10:51 PM Dec 14, 2022 | Team Udayavani |

ಉಡುಪಿ: ಅಲೆವೂರಿನಿಂದ ಮರ್ಣೆ-ಪೆರ್ಣಂಕಿಲ ಸಂಪರ್ಕಿಸುವ ಅಗಲ ಕಿರಿದಾದ ಕಾಂಕ್ರೀಟ್‌-ಡಾಮರು ರಸ್ತೆ ತೀರಾ ಹದಗೆಟ್ಟಿದ್ದು ಸವಾರರು ತೀರ ಸಂಕಷ್ಟದಿಂದ ವಾಹನ ಚಾಲನೆ ಮಾಡಬೇಕಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಇಲ್ಲಿನ 7 ಕಿ. ಮೀ. ರಸ್ತೆ ಉದ್ದಕ್ಕೂ ಹರಿತ, ಉಬ್ಬು-ತಗ್ಗು, ಹೊಂಡ, ಗುಂಡಿಗಳಿಂದ ಸಂಚಾರ ಕಷ್ಟಸಾಧ್ಯವಾಗಿದೆ. ಸವಾರರ ವಾಹನಗಳು ನಿಧಾನವಾಗಿ ಸಂಪೂರ್ಣ ದುಃಸ್ಥಿತಿಯ ಹಂತಕ್ಕೆ ತಲುಪುತ್ತಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಜನವಿರಳ, ಬಸ್‌ಗಳ ವ್ಯವಸ್ಥೆಯೇ ಇರದ ಗ್ರಾಮಗಳ ರಸ್ತೆಗಳು ವಿಸ್ತರಣೆಗೊಂಡು, ವ್ಯವಸ್ಥಿತವಾಗಿದ್ದರೂ ಇಲ್ಲಿ ಮಾತ್ರ ಹದಗೆಟ್ಟ ರಸ್ತೆಯಲ್ಲಿ ಜನರು ಓಡಾಡುವಂತಾಗಿದೆ ಎನ್ನುತ್ತಾರೆ ಮರ್ಣೆ ಗ್ರಾಮಸ್ಥರು.

ಉಡುಪಿಯಿಂದ ಚಾರಣಿಗರ ಗುಂಡುಪಾದೆ ಹಾಗೂ ಇತಿಹಾಸ ಪ್ರಸಿದ್ಧ ಪೆರ್ಣಂಕಿಲ ದೇವಸ್ಥಾನವನ್ನು ಸಂಪರ್ಕಿಸುವ ಅತೀ ಸಮೀಪದ ಪ್ರಮುಖ ದಾರಿ ಇದಾಗಿದೆ.

ರಾತ್ರಿ ಸಂಚಾರ ತೀರ ಕಷ್ಟವಾಗಿದ್ದು, ಸಾಕಷ್ಟು ಮಂದಿ ವಿದ್ಯಾರ್ಥಿ, ಉದ್ಯೋಗಿಗಳು ಈ ಮಾರ್ಗದಲ್ಲಿ ಓಡಾಡುತ್ತಾರೆ. ಹಲವಾರು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಿದ ಘಟನೆಗಳು ನಡೆದಿವೆೆ.

2013ರಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಜನರ ಬೇಡಿಕೆಯಂತೆ ವಿಸ್ತರಣೆಗೊಂಡು ದ್ವಿಪಥ ಪೇವರ್‌ ಫಿನಿಶ್‌ ಆಗಬೇಕಿದ್ದ ರಸ್ತೆ ಇನ್ನೂ ಸಹ ಹಾಗೇ ಉಳಿದುಕೊಳ್ಳುವಂತಾಗಿದೆ. ಅಲ್ಲದೆ ನನೆಗುದಿಗೆ ಬಿದ್ದ ಕೊಡಂಗಳ ಹೊಸ ಸೇತುವೆ ನಿರ್ಮಾಣದ ಬಗ್ಗೆಯೂ ಆಡಳಿತ ವ್ಯವಸ್ಥೆ ಗಮನ ವಹಿಸಬೇಕಿದೆ ಎಂದು ಸ್ಥಳೀಯರು ವಿನಂತಿಸಿದ್ದಾರೆ.

Advertisement

ಪ್ರಸ್ತಾವನೆ ಸಲ್ಲಿಕೆ
ಮಣಿಪುರ ಗ್ರಾ. ಪಂ. ವತಿಯಿಂದ ಈಗಾಗಲೇ ಹಲವು ಕಡೆಗಳಲ್ಲಿ ರಸ್ತೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಮರ್ಣೆ-ಪೆರ್ಣಂಕಿಲ ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯರೊಂದಿಗೆ ಚರ್ಚಿಸಿ ಶೀಘ್ರ ಯೋಜನೆ ರೂಪಿಸಲಾಗುವುದು. ಶಾಸಕರು ಮತ್ತು ಜಿ. ಪಂ.ಗೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಹಸನ್‌ ಶೇಖ್‌ ಅಹಮ್ಮದ್‌, ಅಧ್ಯಕ್ಷರು, ಮಣಿಪುರ ಗ್ರಾ. ಪಂ.

ಯೋಜನೆ ರೂಪಿಸಿ
ಮರ್ಣೆ-ಪೆರ್ಣಂಕಿಲ ರಸ್ತೆಯಲ್ಲಿ ಸಂಚಾರ ತೀರ ಕಷ್ಟಕರವಾಗಿದೆ.ಇದರೊಂದಿಗೆ ಮರ್ಣೆ- ಅಂಗಡಿಬೆಟ್ಟು(ಹಿರೇಬೆಟ್ಟು), ಮರ್ಣೆ-ಕನರಾಡಿ-ಮೂಡುಬೆಳ್ಳೆ ರಸ್ತೆ ಅಭಿವೃದ್ಧಿಯಾಗಬೇಕು. ತಾತ್ಕಾಲಿಕ ರಸ್ತೆಯ ದುರಸ್ತಿಯ ಬದಲು ಸಂಪೂರ್ಣ ಗುಣಮಟ್ಟದ ಹೊಸ ದ್ವಿಪಥ ರಸ್ತೆ ನಿರ್ಮಿಸಲು ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಯೋಜನೆ ರೂಪಿಸಬೇಕು.
– ಪವನ್‌ ಆಚಾರ್ಯ ಮರ್ಣೆ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next