ಮುಂಬಯಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಗುರುವಾರ (ಮೇ 5) ಬೆಳಗ್ಗೆ 800ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯಾಗಿತ್ತು. ಆದರೆ ಲಾಭಾಂಶ ಕಾಯ್ದಿರಿಸಿದ ಪರಿಣಾಮ ಅಲ್ಪ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಟಿ 20 ವಿಶ್ವಕಪ್ : ರೋಹಿತ್, ರಾಹುಲ್,ಕೊಹ್ಲಿಯೇ ಭಾರತದ ಅಗ್ರ ಆಟಗಾರರು?
ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 897.77 ಅಂಕ ಏರಿಕೆಯೊಂದಿಗೆ 56,566.80 ಅಂಕಗಳಲ್ಲಿತ್ತು. ನಂತರ ಷೇರುಪೇಟೆ ಸೆನ್ಸೆಕ್ಸ್ ಕೇವಲ 33.20 ಅಂಕಗಳ ಅಲ್ಪ ಏರಿಕೆಯೊಂದಿಗೆ 55,702.23 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೇವಲ 5.05ರಷ್ಟು ಅಲ್ಪ ಏರಿಕೆಯೊಂದಿಗೆ 16,682.65 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಟೆಕ್ ಮಹೀಂದ್ರ, ಇನ್ಫೋಸಿಸ್, ಎಚ್ ಸಿಎಲ್ ಟೆಕ್ನಾಲಜೀಸ್, ಟಾಟಾ ಸ್ಟೀಲ್, ವಿಪ್ರೋ, ಐಟಿಸಿ, ಟಿಸಿಎಸ್, ಕೋಟಕ ಮಹೀಂದ್ರ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯ ಲಾಭಗಳಿಸಿದೆ.
ಮತ್ತೊಂದೆಡೆ ಇಂಡಸ್ ಇಂಡ್ ಬ್ಯಾಂಕ್, ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಆಲ್ಟ್ರಾ ಟೆಕ್ ಸಿಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಬಜಾಜ್ ಫಿನ್ ಸರ್ವ್ ಮತ್ತು ಟೈಟಾನ್ ಷೇರುಗಳು ಭರ್ಜರಿ ನಷ್ಟ ಕಂಡಿದೆ.
ಏಷ್ಯಾ, ಹಾಂಗ್ ಕಾಂಗ್ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಕುಸಿತ ಕಂಡಿದ್ದು, ಶಾಂಘೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಅಲ್ಪ ಚೇತರಿಕೆ ಕಂಡಿದೆ. ಜಪಾನ್ ಮತ್ತು ಕೋರಿಯಾ ಷೇರು ಮಾರುಕಟ್ಟೆಗೆ ರಜೆ ಇದ್ದಿರುವುದಾಗಿ ವರದಿ ವಿವರಿಸಿದೆ.