Advertisement
ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ವಲಯದ ಶೇರು ಭರ್ಜರಿ ವಹಿವಾಟು ನಡೆಸಿದ ಪರಿಣಾಮ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ದಿನಾಂತ್ಯದ ವಹಿವಾಟಿನಲ್ಲಿ 452.73 ಅಂಕಗಳಷ್ಟು ಏರಿಕೆಯೊಂದಿಗೆ 46,006.69 ಅಂಕಗಳೊಂದಿಗೆ ಕೊನೆಗೊಂಡಿದೆ.
Related Articles
Advertisement
ಬ್ರಿಟನ್ ನಲ್ಲಿ ಕೊರೊನಾವೈರಸ್‌ನ ಭಿನ್ನ ಸ್ವರೂಪ ಪತ್ತೆಯಾಗಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ, ಮುಂದಿನ ವರ್ಷ ಆರ್ಥಿಕ ಚೇತರಿಕೆಯಾಗಬಹುದು ಎಂಬ ನಿರೀಕ್ಷೆಯ ಮೇಲೆ ದಟ್ಟ ಕಾರ್ಮೋಡ ಕವಿಯುವಂತೆ ಮಾಡಿತ್ತು.
ಈ ಎಲ್ಲ ಭೀತಿಗಳಿಂದಾಗಿ ಹೂಡಿಕೆದಾರರು ಸೋಮವಾರ ಒಂದೇ ಸಮನೆ ಷೇರುಗಳ ಮಾರಾಟದಲ್ಲಿ ತೊಡಗಿಸಿಕೊಂಡ ಪರಿಣಾಮ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1407 ಅಂಕಗಳ ಕುಸಿತ ದಾಖಲಿಸಿ, ದಿನಾಂತ್ಯಕ್ಕೆ 45,553.96ರಲ್ಲಿ ಕೊನೆಗೊಂಡಿತ್ತು.
ನಿಫ್ಟಿ ಕೂಡ 432.15 ಅಂಕ ಕುಸಿದು, 13,328.40ರಲ್ಲಿ ವಹಿವಾಟು ಅಂತ್ಯಗೊಳಿಸಿದ್ದು. ಒಎನ್‌ಜಿಸಿ ಷೇರುಗಳು ಶೇ.9.15ರಷ್ಟು ಕುಸಿದು ಭಾರೀ ನಷ್ಟ ಅನುಭವಿಸಿತ್ತು.