ಮುಂಬೈ: ಅಮೆರಿಕ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಇದರಿಂದ ಮಧ್ಯಏಷ್ಯಾದಲ್ಲಿ ಯುದ್ಧ ಭೀತಿ ಆವರಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಕುಸಿತದ ಮೂಲಕ ಸೋಮವಾರದ ವಹಿವಾಟು ನಡೆಸಿದೆ.
ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 700 ಅಂಕಗಳಷ್ಟು ಕುಸಿತದೊಂದಿಗೆ 40,762.58 ಅಂಕಗಳ ವಹಿವಾಟಿಗೆ ಸಾಕ್ಷಿಯಾಗಿದೆ.
ಅಲ್ಲದೇ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 212 ಅಂಕಗಳ ನಷ್ಟದೊಂದಿಗೆ 12,015 ಅಂಕಗಳ ಗಡಿಗೆ ಬಂದು ತಲುಲಿದೆ.
ಮಧ್ಯಾಹ್ನ 12.20ರ ಸುಮಾರಿಗೆ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 648 ಅಂಕಗಳ ಕುಸಿತ ಕಂಡಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 191 ಅಂಕಗಳ ನಷ್ಟ ಅನುಭವಿಸಿರುವುದಾಗಿ ವರದಿ ತಿಳಿಸಿದೆ.
ಅಮೆರಿಕ ವಾಯುಪಡೆ ಇರಾಕ್ ನ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಇರಾಕ್ ಪಡೆಯ ಮುಖ್ಯಸ್ಥ ಖಾಸಿಂ ಸೊಲೆಮನಿಯನ್ನು ಕೊಲ್ಲಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದು, ಇದರಿಂದ ಉಭಯ ದೇಶಗಳ ನಡುವೆ ಘರ್ಷಣೆ ಆರಂಭವಾಗಿದೆ. ಇರಾನ್, ಅಮೆರಿಕ ಯುದ್ಧಭೀತಿಯಿಂದಾಗಿ ಜಾಗತಿಕ ಈಕ್ವಿಟಿ, ಶೇರು ಮಾರುಕಟ್ಟೆ ಭಾರೀ ಕುಸಿತ ಕಂಡಿರುವುದಾಗಿ ವರದಿ ವಿವರಿಸಿದೆ.