ಮುಂಬಯಿ: ಕೇಂದ್ರ ಬಜೆಟ್ ನಂತರದಲ್ಲಿ ಏರಿಕೆಯ ಹಾದಿ ಹಿಡಿದಿದ್ದ ಮುಂಬಯಿ ಷೇರುಪೇಟೆಯಲ್ಲಿ ಮಂಗಳವಾರವೂ(ಫೆ.09, 2021) ವಹಿವಾಟಿನಲ್ಲಿ ಷೇರುಗಳ ಖರೀದಿ ಭರ್ಜರಿಯಾಗಿ ನಡೆಯುವ ಮೂಲಕ ದಾಖಲೆಯ ಗಡಿ ತಲುಪಿದೆ.
ಇದನ್ನೂ ಓದಿ:ಕೆಂಪುಕೋಟೆ ಗಲಭೆ ಪ್ರಕರಣ: ನಟ ದೀಪ್ ಸಿಧು ಬಂಧಿಸಿದ ದಿಲ್ಲಿ ಪೊಲೀಸರು
ಕಾರ್ಪೋರೇಟ್ ಕಂಪನಿಗಳ ಸಕಾರಾತ್ಮಕ ಫಲಿತಾಂಶ ಹಾಗೂ ಭಾರೀ ಪ್ರಮಾಣದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 145.00 ಅಂಕಗಳ ಏರಿಕೆಯೊಂದಿಗೆ 51, 493.77 ಅಂಕಗಳ ವಹಿವಾಟು ಆರಂಭಿಸಿದೆ.
ಎನ್ ಎಸ್ ಇ ನಿಫ್ಟಿ ಕೂಡಾ 52.15 ಅಂಕಗಳಷ್ಟು ಏರಿಕೆಯಾಗಿ 15,167.95 ಅಂಕಗಳ ದಾಖಲೆಯ ಗಡಿ ತಲುಪಿದೆ. ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಏರಿಕೆಯಿಂದ ಒಎನ್ ಜಿಸಿ, ಇನ್ಫೋಸಿಸ್, ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಏಷ್ಯನ್ ಪೈಂಟ್, ಆಲ್ಟ್ರಾಚೆಮ್, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರ್ತಿ ಏರ್ ಟೆಲ್, ಮಾರುತಿ ಮತ್ತು ಎಚ್ ಡಿಎಫ್ ಸಿ ಷೇರುಗಳು ಲಾಭಗಳಿಸಿವೆ.
ಮತ್ತೊಂದೆಡೆ ಎಸ್ ಬಿಐ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಐಟಿಸಿ, ಕೋಟಕ್ ಬ್ಯಾಂಕ್, ಬಜಾಜ್ ಆಟೋ, ಸನ್ ಫಾರ್ಮಾ, ಡಾ.ರೆಡ್ಡಿ ಮತ್ತು ನೆಸ್ಲೆ ಷೇರುಗಳು ನಷ್ಟ ಕಂಡಿವೆ.