ಮುಂಬಯಿ:ಜಾಗತಿಕ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟಿನ ಹಿನ್ನಲೆಯಲ್ಲಿ ಮುಂಬಯಿ ಷೇರುಪೇಟೆ ಬುಧವಾರ(ಫೆ.10, 2021)ವೂ ಯಥಾಸ್ಥಿತಿಯಲ್ಲಿ ಏರಿಕೆಯ ವಹಿವಾಟು ಆರಂಭಿಸುವ ಮೂಲಕ ದಾಖಲೆಯತ್ತ ಸಾಗಿದೆ.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 72.93 ಅಂಕಗಳಷ್ಟು ಅಲ್ಪ ಏರಿಕೆಯೊಂದಿಗೆ 51,402.01 ಅಂಕಗಳ ವಹಿವಾಟಿನೊಂದಿಗೆ 52,000ದ ಗಡಿಯತ್ತ ದಾಪುಗಾಲಿಟ್ಟಿದೆ.
ಎನ್ ಎಸ್ ಇ ನಿಫ್ಟಿ ಕೂಡಾ 29.30 ಅಂಕಗಳ ಏರಿಕೆಯೊಂದಿಗೆ 15,138.60 ಅಂಕಗಳ ಗಡಿ ತಲುಪಿದೆ. ಮಂಗಳವಾರವೂ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 51,329.08 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು. ಎನ್ ಎಸ್ ಇ ನಿಫ್ಟಿ 15,109.30 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು.
ಇಂದಿನ ಸೆನ್ಸೆಕ್ಸ್ ಏರಿಕೆಯೊಂದಿಗೆ ಬಜಾಜ್ ಫಿನ್ ಸರ್ವ್, ಆಲ್ಟ್ರಾಚೆಮ್, ಎಚ್ ಸಿಎಲ್ ಟೆಕ್, ಬಜಾಜ್ ಆಟೋ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಏಷ್ಯನ್ ಪೈಂಟ್. ಒಎನ್ ಜಿಸಿ, ಎಚ್ ಯುಎಲ್ ಮತ್ತು ಐಟಿಸಿ ಷೇರುಗಳು ಲಾಭಗಳಿಸಿವೆ.
ಮತ್ತೊಂದೆಡೆ ಆ್ಯಕ್ಸಿಸ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಎಲ್ ಟಿ, ಎನ್ ಟಿಪಿಸಿ, ಟೈಟಾನ್, ಎಚ್ ಡಿಎಫ್ ಸಿ ಬ್ಯಾಂಕ್, ಪವರ್ ಗ್ರಿಡ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.