ನವದೆಹಲಿ: ದೇಶಾದ್ಯಂತ ಈದ್ ಉಲ್ ಫಿತರ್ ಹಬ್ಬದ ಹಿನ್ನೆಲೆಯಲ್ಲಿ ಮುಂಬಯಿ ಷೇರುಮಾರುಕಟ್ಟೆ, ಎನ್ ಎಸ್ ಇ, ಫೋರೆಕ್ಸ್, ಬುಲಿಯನ್ ಮಾರ್ಕೆಟ್ ಗುರುವಾರ(ಮೇ 13) ಯಾವುದೇ ವಹಿವಾಟು ನಡೆಯುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ:ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ
ಬುಧವಾರ(ಮೇ 12) ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 421.01 ಅಂಕಗಳಷ್ಟು ಕುಸಿತ ಕಂಡಿದ್ದು, 48,690.80 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 154.25 ಅಂಕ ಕುಸಿತವಾಗಿದ್ದು, 14,696.50ರ ಗಡಿ ತಲುಪಿ ವಹಿವಾಟು ಅಂತ್ಯಗೊಳಿಸಿತ್ತು.
ಸೆನ್ಸೆಕ್ಸ್ ಕುಸಿತದಿಂದ ಇಂಡಸ್ ಇಂಡ್ ಬ್ಯಾಂಕ್, ಎಚ್ ಯುಎಲ್, ಒಎನ್ ಜಿಸಿ, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಆಲ್ಟ್ರಾಟೆಕ್ ಸಿಮೆಂಟ್, ಟೆಕ್ ಮಹೀಂದ್ರ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಟೈಟಾನ್, ಮಾರುತಿ, ಪವರ್ ಗ್ರಿಡ್, ಎಸ್ ಬಿಐ, ಎನ್ ಟಿಪಿಸಿ, ಡಾ.ರೆಡ್ಡೀಸ್ ಮತ್ತು ಎಲ್ ಆ್ಯಂಡ್ ಟಿ ಷೇರುಗಳು ಶೇ.1.31ರಷ್ಟು ಲಾಭಗಳಿಸಿದೆ.