ಮುಂಬೈ: ಜಾಗತಿಕ ಷೇರುಪೇಟೆ ವಹಿವಾಟು ಹಾಗೂ ಕೇಂದ್ರ ಬಜೆಟ್ ಮಂಡನೆ ನಂತರ ಸತತ ಆರನೇ ದಿನವಾದ ಸೋಮವಾರ(ಫೆ,08, 2021)ವೂ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಭರ್ಜರಿ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳ್ಳುವ ಮೂಲಕ ಇದೇ ಮೊದಲ ಬಾರಿಗೆ 51 ಸಾವಿರದ ಗಡಿ ದಾಟಿ ದಾಖಲೆ ಬರೆದಿದೆ.
ಇದನ್ನೂ ಓದಿ:ರಾಮಮಂದಿರಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣು 5 ಲಕ್ಷ ರೂ. ದೇಣಿಗೆ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 617.14 ಅಂಕಗಳ ಭರ್ಜರಿ ಏರಿಕೆಯೊಂದಿಗೆ 51,343.77 ಅಂಕಗಳ ದಾಖಲೆ ವಹಿವಾಟಿನೊಂದಿಗೆ ಮುಕ್ತಾಯಗೊಂಡಿದೆ. ಅಲ್ಲದೇ ಎನ್ ಎಸ್ ಇ ನಿಫ್ಟಿ ಕೂಡಾ 191.55 ಅಂಕಗಳ ಏರಿಕೆಯೊಂದಿಗೆ ದಾಖಲೆಯ 15,115.80 ಅಂಕಗಳ ಗಡಿ ತಲುಪಿ ವಹಿವಾಟು ಮುಕ್ತಾಯಗೊಳಿಸಿದೆ.
ಕೇಂದ್ರ ಬಜೆಟ್ ಮಂಡನೆ ನಂತರ ಬಾಂಬೆ ಷೇರುಪೇಟೆ ಭರ್ಜರಿ ವಹಿವಾಟಿಗೆ ಸಾಕ್ಷಿಯಾಗಿದ್ದು, ಇದರಿಂದ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಬಜಾಜ್ ಫಿನ್ ಸರ್ವ್, ಭಾರ್ತಿ ಏರ್ ಟೆಲ್, ಪವರ್ ಗ್ರಿಡ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಆ್ಯಕ್ಸಿಸ್ ಬ್ಯಾಂಕ್, ಒಎನ್ ಜಿಸಿ, ಟೈಟಾನ್ ಷೇರುಗಳು ಶೇ.7.23ರಷ್ಟು ಲಾಭ ಗಳಿಸಿವೆ.
ಏತನ್ಮಧ್ಯೆ ಎಚ್ ಯುಎಲ್, ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಐಟಿಸಿ, ಬಜಾಜ್ ಆಟೋ ಮತ್ತು ಸನ್ ಫಾರ್ಮಾ ಷೇರುಗಳು ನಷ್ಟ ಅನುಭವಿಸಿದೆ.