ಮುಂಬೈ:ಲೋಕಸಭೆ ಚುನಾವಣೆಯ ಫಲಿತಾಂಶದ ದಿನಗಣನೆ ನಡುವೆ ಗುರುವಾರ (ಮೇ 23) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ವಹಿವಾಟು ನಡೆದಿದೆ.
ಇದನ್ನೂ ಓದಿ:Jayant Sinha: ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಸಂಸದ ಜಯಂತ್ ಸಿನ್ಹಾ ಹೇಳಿದ್ದೇನು?
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 546.32 ಅಂಕಗಳಷ್ಟು ಏರಿಕೆಯೊಂದಿಗೆ 74,767.38 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 159.80 ಅಂಕಗಳಷ್ಟು ಏರಿಕೆ ಜತೆ 22,757.60 ಅಂಕಗಳಲ್ಲಿ ವಹಿವಾಟು ಮುಂದುವರಿಸಿದೆ.
ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಏರಿಕೆಯಿಂದ ಆಕ್ಸಿಸ್ ಬ್ಯಾಂಕ್, ಅದಾನಿ ಎಂಟರ್ ಪ್ರೈಸಸ್, ಎಲ್ & ಟಿ, ಇಂಡಸ್ ಇಂಡ್ ಬ್ಯಾಂಕ್ ಮತ್ತು ಈಚರ್ ಮೋಟಾರ್ಸ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಪವರ್ ಗ್ರಿಡ್, ಸನ್ ಫಾರ್ಮಾ, ಹಿಂಡಲ್ಕೋ, ಕೋಲ್ ಇಂಡಿಯಾ, ಗ್ರಾಸಿಮ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿದೆ. ಆರಂಬಿಕ ವಹಿವಾಟಿನ ಸಂದರ್ಭದಲ್ಲಿ ಸನ್ ಫಾರ್ಮಾ ಷೇರು ಬೆಲೆ ಶೇ.4ರಷ್ಟು ಕುಸಿತ ಕಂಡಿತ್ತು.